ನಿಯೋಜನೆ

ಜಮ್ಮು: ಉಗ್ರ ವಿರೋಧಿ ಕಾರ್ಯಾಚರಣೆ;NSG ನಿಯೋಜನೆ
ಉಗ್ರರ ದಾಳಿ ಹಿನ್ನೆಲೆಯಲ್ಲಿ ವಿಶೇಷ ಪಡೆ ನಿಯೋಜನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಆನಂದ್ ಜೈನ್, ರಾಷ್ಟ್ರೀಯ ಭದ್ರತಾ ಸಿಬ್ಬಂದಿಯ ನಿಯೋಜನೆ ನಡೆದಿದೆ

ಜಮ್ಮು: ಪಾಕ್ ಉಗ್ರರ ಒಳನುಸುಳುವಿಕೆ ಹೆಚ್ಚಳ, 500 ಪ್ಯಾರಾ ಕಮಾಂಡೋ ನಿಯೋಜನೆ!
ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸಲು 50-55 ಪಾಕಿಸ್ತಾನಿ ಭಯೋತ್ಪಾದಕರು ಗಡಿಯೊಳಗೆ ನುಸುಳಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಭೇಟಿಯಾಡಲು ಭಾರತೀಯ ಸೇನೆಯ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸುತ್ತಿದೆ.

ಅಯೋಧ್ಯೆ: ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭ; ನಗರಾದಾದ್ಯಂತ ಬಿಗಿ ಭದ್ರತೆ!
ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನಾ ಸಮಾರಂಭ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಸುಮಾರು 7,000ಕ್ಕೂ ಅಧಿಕ ಗಣ್ಯರು ಸೇರಿದಂತೆ ಸಾವಿರಾರು ಮಂದಿ ರಾಮನ ಭಕ್ತರು ಅಯೋಧ್ಯೆಗೆ ಲಗ್ಗೆ ಇಟ್ಟಿದ್ದು, ಶಾಂತಿ ಸುವ್ಯವಸ್ಥೆಗಾಗಿ ಸೂಕ್ತ ಭದ್ರತೆ ಒದಗಿಸಲಾಗಿದೆ.

ಇದೇ ಮೊದಲು, ಜಮ್ಮುವಿನಲ್ಲಿ ರಾತ್ರಿ ಪಾಳಿಯಲ್ಲಿ ಮಹಿಳಾ ಪೊಲೀಸರ ನಿಯೋಜನೆ!
ಮಹಿಳೆಯರ ಸುರಕ್ಷತೆ ಖಾತ್ರಿ ಮತ್ತು ಮಹಿಳಾ ಡ್ರಗ್ ಪೆಡ್ಲರ್‌ಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ರಾತ್ರಿ ಸಮಯದಲ್ಲಿ ಜಮ್ಮು ನಗರದ ವಿವಿಧ ಪ್ರಮುಖ ಚೆಕ್‌ಪೋಸ್ಟ್‌ಗಳಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲವು ಐಪಿಎಸ್ ಅಧಿಕಾರಿಗಳ ವರ್ಗಾವಣೆ: ಬೆಂಗಳೂರು ಟ್ರಾಫಿಕ್ ನಿರ್ವಹಣೆಗೆ ಎಡಿಜಿಪಿ ಮಟ್ಟದ ಅಧಿಕಾರಿ ನಿಯೋಜನೆ
ಮಹಾನಗರದಲ್ಲಿನ ಸಂಚಾರ ದಟ್ಟಣೆಯನ್ನು ಇನ್ನೂ ಉತ್ತಮ ರೀತಿಯಲ್ಲಿ ನಿರ್ವಹಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಂಟಿ ಪೊಲೀಸ್ ಆಯುಕ್ತರ (ಸಂಚಾರ) ಹುದ್ದೆಯನ್ನು ವಿಶೇಷ ಆಯುಕ್ತರನ್ನಾಗಿ ಮೇಲ್ದರ್ಜೇಗೇರಿಸಿದೆ. ಇದಕ್ಕೆ ಎಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಿದೆ.

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ 6,000 ಸೇನಾಪಡೆಗಳ ನಿಯೋಜನೆ
ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಚುನಾಯಿತ ಆಡಳಿತ ಹಠಾತ್ತನೆ ಪತನಗೊಂಡು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆಯುತ್ತಿದ್ದಂತೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳ ಜನರ ಸುರಕ್ಷಿತ ನಿರ್ಗಮನದ ಖಾತ್ರಿಗಾಗಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ 6,000 ಸೇನಾ ಪಡೆಗಳನ್ನು ನಿಯೋಜಿಸಿರುವುದಾಗಿ ಅಮೆರಿಕ ಹೇಳಿದೆ.

ಅಸ್ಸಾಂ- ಮಿಜೋರಾಂ ಗಡಿಯಲ್ಲಿ ನಾಲ್ಕು ಸಿಆರ್ ಪಿಎಫ್ ತುಕಡಿಗಳ ನಿಯೋಜನೆ
ಅಸ್ಸಾಂ- ಮಿಜೋರಾಂ ಗಡಿಯ ವಿವಾದಿತ ಪ್ರದೇಶದಲ್ಲಿ ನಾಲ್ಕು ಹೆಚ್ಚುವರಿ ಕೇಂದ್ರಿಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ತುಕಡಿಗಳನ್ನು ನಿಯೋಜಿಸಲಾಗಿದೆ. ನಿನ್ನೆ ಇಲ್ಲಿ ಉಭಯ ರಾಜ್ಯಗಳ ಪೊಲೀಸರ ನಡುವೆ ಸಂಭವಿಸಿದ ಗುಂಡಿನ ಕಾಳಗದಲ್ಲಿ ಐವರು ಅಸ್ಸಾಂ ಪೊಲೀಸರು ಮೃತಪಟ್ಟಿದ್ದರು.

ಎಲ್ಒಸಿಯಲ್ಲಿ ಪಾಕಿಸ್ತಾನದ 100 ಕ್ಕೂ ಹೆಚ್ಚು ವಿಶೇಷ ಕಮಾಂಡೋಗಳ ನಿಯೋಜನೆ!
ಭಾರತೀಯ ಸೇನೆಯ ವಿರುದ್ಧ ಸಂಭಾವ್ಯ ದಾಳಿ ನಡೆಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ 100ಕ್ಕೂ ಹೆಚ್ಚು ವಿಶೇಷ ಕಮಾಂಡೋಗಳನ್ನು ಪಾಕಿಸ್ತಾನ ನಿಯೋಜಿಸಿದೆ.

ಉಗ್ರರ ದಾಳಿ ಬೆದರಿಕೆ: ಕಾಶ್ಮೀರದಲ್ಲಿ ಹೆಚ್ಚುವರಿ ಸೈನಿಕರ ನಿಯೋಜನೆ
ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಭಾರಿ ದಾಳಿ ನಡೆಸಲು ಪಾಕಿಸ್ತಾನದ ಮೂಲದ ಉಗ್ರಗಾಮಿ ಗುಂಪುಗಳು ಸಂಚು ರೂಪಿಸುವೆ ಎಂಬ ಮಾಹಿತಿ ಹಿನ್ವೆಲೆಯಲ್ಲಿ ಈ ಪ್ರದೇಶದಲ್ಲಿ ಉಗ್ರರಿಗೆ ಪ್ರತ್ಯುತ್ತರ ನೀಡುವ ಸಲುವಾಗಿ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗಿದೆ.

