ಕ್ಲಿನಿಕಲ್ ಟ್ರಯಲ್ ವೇಳೆ ಪ್ರಮಾದ: ಓರ್ವ ಮಿದುಳು ನಿಷ್ಕ್ರಿಯ, ಐವರು ಕೋಮಾಕ್ಕೆ
ಯುರೋಪಿಯನ್ ಲ್ಯಾಬೊರೆಟರಿ ಅಭಿವೃದ್ಧಿಪಡಿಸಿದ್ದ ಔಷಧವೊಂದರ ಪರೀಕ್ಷೆ ವೇಳೆ ಪ್ಯಾರಿಸ್ ನಲ್ಲಿ ಅವಘಡ ಸಂಭವಿಸಿದೆ. ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಆರು ಜನರ ಪೈಕಿ ಒಬ್ಬರಿಗೆ...

ಪ್ಯಾರಿಸ್: ಯುರೋಪಿಯನ್ ಲ್ಯಾಬೊರೆಟರಿ ಅಭಿವೃದ್ಧಿಪಡಿಸಿದ್ದ ಔಷಧವೊಂದರ ಪರೀಕ್ಷೆ ವೇಳೆ ಪ್ಯಾರಿಸ್ ನಲ್ಲಿ ಅವಘಡ ಸಂಭವಿಸಿದೆ. ಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದ ಆರು ಜನರ ಪೈಕಿ ಒಬ್ಬರಿಗೆ ಮಿದುಳು ನಿಷ್ಕ್ರಿಯಗೊಂಡಿದ್ದು, ಐವರು ಕೋಮಾಕ್ಕೆ ಜಾರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪ್ರಾನ್ಸ್ ನ ಆರೋಗ್ಯ ಸಚಿವ ಮಾರಿಸೋಲ್ ಟೊರೈನ್, 'ಸದ್ಯಪರೀಕ್ಷೆಯನ್ನು ಸ್ಥಗಿತಗೊಳಿಸಲಾಗಿದೆ. ಪರೀಕ್ಷೆಯಲ್ಲಿ ಭಾಗವಹಿಸಿದ್ದ ಇತರ ಸ್ವಯಂ ಸೇವಕರನ್ನು ಹಿಂದೆ ಕಳುಹಿಸಲಾಗಿದೆ,'' ಎಂದು ಹೇಳಿದೆ. ಮೂಲಗಳ ಪ್ರಕಾರ, 'ನೋವು ನಿವಾರಕ ಔಷಧದ ಪರೀಕ್ಷೆ ನಡೆಯುತ್ತಿತ್ತು. ಔಷಧದಲ್ಲಿ ಗಾಂಜಾ ಗಿಡದ ಪದಾರ್ಥಗಳನ್ನು ಬಳಸಲಾಗಿತ್ತು,'' ಎಂದು ಹೇಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


