ನಮ್ಮ ಸೇನೆ ವಿಶ್ವದ ಅತ್ಯಂತ ವೃತ್ತಿಪರತೆಯುಳ್ಳ ಸೇನೆಗಳ ಪೈಕಿ ಗುರುತಿಸಲ್ಪಟ್ಟಿದೆ: ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್
ಭಾರತೀಯ ಸೇನೆಯನ್ನು ವಿಶ್ವದ ಬಲಿಷ್ಠ ಹಾಗೂ ಅತ್ಯಂತ ವೃತ್ತಿ ಪರತೆಯುಳ್ಳ ಸೇನೆಗಳ ಪೈಕಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.

ನವದೆಹಲಿ: 68 ನೇ ಸೇನಾ ದಿನಾಚರಣೆಯ ಅಂಗವಾಗಿ ಮಾತನಾಡಿರುವ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಭಾರತೀಯ ಸೇನೆಯನ್ನು ವಿಶ್ವದ ಬಲಿಷ್ಠ ಹಾಗೂ ಅತ್ಯಂತ ವೃತ್ತಿ ಪರತೆಯುಳ್ಳ ಸೇನೆಗಳ ಪೈಕಿ ಗುರುತಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ, ನೈಸರ್ಗಿಕ ವಿಪತ್ತುಗಳಿಗೆ ಸಮರ್ಥವಾಗಿ ಸ್ಪಂಧಿಸುತ್ತದೆ, ವಿಪತ್ತು ನಿರ್ವಹಣೆ ವಿಷಯದಲ್ಲಿ ಭಾರತೀಯ ಸೇನೆಯ ಕಾರ್ಯಾಚರಣೆಯನ್ನು ವಿದೇಶಗಳೂ ಕೊಂಡಾಡಿವೆ. ಸವಾಲುಗಳನ್ನು ಎದುರಿಸಲು ಭಾರತೀಯ ಸೇನೆ ಸನ್ನದ್ಧವಾಗಿದ್ದು, ಸಮಸ್ಯೆಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಹೊಂದಿದ್ದು ವಿಶ್ವದ ಬಲಿಷ್ಠ ಸೇನೆಗಳಲ್ಲಿ ಭಾರತೀಯ ಸೇನೆಯೂ ಒಂದಾಗಿದೆ ಎಂದು ದಲ್ಬೀರ್ ಸಿಂಗ್ ಹೇಳಿದ್ದಾರೆ.
ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸಲು ಸೇನೆ, ನೌಕಾದಳ, ವಾಯುಪಡೆ ವಿಭಾಗಗಳ ಹೊಂದಾಣಿಕೆ ಮುಖ್ಯವಾಗಿರುತ್ತದೆ. ಆರ್ಮಿ ಬೇಸ್ ಆಸ್ಪತ್ರೆಗಳಲ್ಲಿ ಹಿರಿಯರಿಗೆ ಚಿಕಿತ್ಸೆ ನೀಡುವುದಕ್ಕಾಗಿಯೆ ಪ್ರತ್ಯೇಕ ವಿಭಾಗ ಪ್ರಾರಂಭಿಸಲಾಗುವುದು ಎಂದು ದಲ್ಬೀರ್ ಸಿಂಗ್ ಹೇಳಿದ್ದಾರೆ. ಲೆಫ್ಟಿನೆಂಟ್ ಜನರಲ್ ಕೆಎಂ ಕಾರ್ಯಪ್ಪ ಜ.15 ರಂದು ಭಾರತೀಯ ಸೇನೆಯ ಮೊದಲ ಪ್ರಧಾನ ದಂಡನಾಯಕರಾಗಿ ಅಧಿಕಾರ ಸ್ವೀಕರಿಸಿದ ದಿನವನ್ನು ಸೇನಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


