ದೇಶ

ಪಾಕ್ ಮಾಧ್ಯಮದಲ್ಲೂ ಮಸೂದ್ ಬಂಧನ ವರದಿ

ಜೈಶ್ಎಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನವನ್ನು ಪಾಕಿಸ್ತಾನದ ಮಾಧ್ಯಮಗಳು ಮುಖ್ಯವಾಗಿಯೇ ಪ್ರಕಟಿಸಿವೆ...

ಪಾಕ್ ಮಾಧ್ಯಮದಲ್ಲೂ ಮಸೂದ್ ಬಂಧನ ವರದಿ
ಜೈಶ್ ಇ ಮೊಹಮದ್ ಸಂಘಟನೆ ಮುಖ್ಯಸ್ಥ ಉಗ್ರ ಮಸೂದ್ ಅಜರ್ (ಸಂಗ್ರಹ ಚಿತ್ರ)
Published On :

ಇಸ್ಲಾಮಾಬಾದ್: ಜೈಶ್ಎಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಬಂಧನವನ್ನು ಪಾಕಿಸ್ತಾನದ ಮಾಧ್ಯಮಗಳು ಮುಖ್ಯವಾಗಿಯೇ ಪ್ರಕಟಿಸಿವೆ.

ಭಾರತ ಮತ್ತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಗೆ 2 ದಿನಗಳು ಇರುವಾಗಲೇ ಇಂಥ ಕ್ರಮ ಕೈಗೊಳ್ಳಲಾಗಿವೆ ಎಂದು ಅವುಗಳು ವರದಿ ಮಾಡಿವೆ. ಕರಾಚಿ ಮೂಲದ  ಜಿಯೋ ಟಿವಿ ಮೊದಲು ಬಂಧನದ ಸುದ್ದಿ ಪ್ರಕಟಿಸಿತು. ಪಾಕ್‍ನ ಪ್ರಮುಖ ಪತ್ರಿಕೆ `ದ ನೇಶನ್' ಪಾಕಿಸ್ತಾನ ಭಾರತದ ಜತೆ ಕೈಜೋಡಿಸಲು ಮುಂದಾಗಿದೆ. ಜೈಶ್ ಮುಖ್ಯಸ್ಥನನ್ನು ಬಂಧಿಸಲಾಗಿದೆ  ಎಂದು ಪತ್ರಿಕೆ ವರದಿ ಮಾಡಿತು.

ಆದರೆ `ದ ಡಾನ್', `ದ ಎಕ್ಸ್ಪ್ರೆಸ್ ಟ್ರಿಬ್ಯೂನ್', `ಜಿಯೋ ನ್ಯೂಸ್'ಗಳಲ್ಲಿ ಜೈಶ್ ಸಂಘಟನೆ ಸದಸ್ಯರನ್ನು ಬಂಧಿಸಲಾಗಿದೆ ಎಂದು ವರದಿ ಪ್ರಕಟಿಸಿದ್ದವು. ಆದರೆ ಅಜರ್‍ನ ಹೆಸರನ್ನು ಉಲ್ಲೇಖಿಸಲೇ  ಇಲ್ಲ. ಪಾಕಿಸ್ತಾನದ `ದ ನೇಶನ್' ಪತ್ರಿಕೆ ಮಾತ್ರ ಅಜರ್‍ನ ಹೆಸರನ್ನು ಪ್ರಕಟಿಸುವ ಧೈರ್ಯ ಮಾಡಿತು.

ಚೀನಾದ ಮೇಲೆ ಭಾರತದ ಒತ್ತಡ
ಮತ್ತೊಂದು ಮಹತ್ವದ ರಾಜತಾಂತ್ರಿಕ ನಡೆಯಲ್ಲಿ ಚೀನಾದ ಮೂಲಕ ಒತ್ತಡತಂತ್ರ ರೂಪಿಸಲು ಮುಂದಾಗಿದೆ. ಜೈಷ್ ನಾಯಕ ಮಸೂದ್‍ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು  ಘೋಷಿಸಲು ಚೀನಾ ಮೂಲಕ ಬುದ್ಧಿವಾದ ಹೇಳಿಸಲು ಮುಂದಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.