ದೇಶ

ಮಾಯಾ ಪಾದಕ್ಕೆ ನಮಸ್ಕರಿಸಿದ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿದ ಅಭ್ಯರ್ಥಿಯ ಟಿಕೆಟ್ ರದ್ದು

ಬಿಎಸ್ಪಿ ನೇತಾರೆ ಮಾಯಾವತಿಯ ಪಾದಕ್ಕೆ ನಮಸ್ಕರಿಸುತ್ತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಅಭ್ಯರ್ಥಿಯೊಬ್ಬರ...

ಮಾಯಾ ಪಾದಕ್ಕೆ ನಮಸ್ಕರಿಸಿದ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿದ ಅಭ್ಯರ್ಥಿಯ ಟಿಕೆಟ್ ರದ್ದು
ಮಾಯಾವತಿ ಪಾದಕ್ಕೆ ನಮಸ್ಕರಿಸುತ್ತಿರುವ ಸಂಗೀತ (ಕೃಪೆ: ಫೇಸ್ ಬುಕ್)
Published On :
ಅಲಿಘಡ್: ಬಿಎಸ್ಪಿ ನೇತಾರೆ ಮಾಯಾವತಿಯ ಪಾದಕ್ಕೆ ನಮಸ್ಕರಿಸುತ್ತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಅಭ್ಯರ್ಥಿಯೊಬ್ಬರ ವಿಧಾನಸಭಾ ಚುನಾವಣೆಗಿರುವ ಟಿಕೆಟ್‌ನ್ನು ರದ್ದು ಮಾಡಲಾಗಿದೆ.
ಉತ್ತರಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಅಟ್ರೌಲಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದ ಸಂಗೀತ ಚೌಧರಿ ಎಂಬ ಅಭ್ಯರ್ಥಿ, ಆಕೆ ಮತ್ತು ಆಕೆಯ ಮಕ್ಕಳು ಮಾಯಾವತಿಯ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಛಾಯಾಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.
ಇದನ್ನು ನೋಡಿ ಕೆರಳಿದ ಮಾಯಾ, ಸಂಗೀತ ಅವರ ವಿಧಾನಸಭಾ ಟಿಕೆಟ್‌ನ್ನು ರದ್ದು ಮಾಡಿದ್ದಾರೆ. ಪಕ್ಷದ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಸಂಗೀತ ಅವರ ಟಿಕೆಟ್ ರದ್ದುಗೊಳಿಸಲಾಗಿದೆ ಎಂದು ಬಿಎಸ್ಪಿ ಅಧ್ಯಕ್ಷ ಅರವಿಂದ್ ಆದಿತ್ಯ  ಹೇಳಿದ್ದಾರೆ.
ಅಟ್ರೌಲಿ ಕ್ಷೇತ್ರದಿಂದ ಸಂಗೀತ ಅವರ ಪತಿ ಧರ್ಮೇಂದ್ರ ಚೌಧರಿ ಸ್ಪರ್ಧಿಸಲಿದ್ದರು. ಆದರೆ ಕಳೆದ ವರ್ಷ ಜನವರಿಯಲ್ಲಿ ಅವರ ಹತ್ಯೆಯಾಗಿರುವುದರಿಂದ ಪತ್ನಿ ಸಂಗೀತ ಅವರಿಗೆ ಟಿಕೆಟ್ ನೀಡಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.