400 ಜಡ್ಜ್ ಗಳ ನೇಮಕಕ್ಕೆ ಕೊಲಿಜಿಯಂ ಸಜ್ಜು
ಎನ್‍ಡಿಎ ಸರ್ಕಾರದ ನ್ಯಾಯಾಂಗ ನೇಮಕ ಆಯೋಗವನ್ನು ರದ್ದು ಮಾಡಿದ 3 ತಿಂಗಳ ಬಳಿಕ, ಈಗ ಖಾಲಿ ಹುದ್ದೆಗಳನ್ನು...

Published On :
ನವದೆಹಲಿ: ಎನ್‍ಡಿಎ ಸರ್ಕಾರದ ನ್ಯಾಯಾಂಗ ನೇಮಕ ಆಯೋಗವನ್ನು ರದ್ದು ಮಾಡಿದ 3 ತಿಂಗಳ ಬಳಿಕ, ಈಗ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವತ್ತ ಕೊಲೀಜಿಯಂ ಹೆಜ್ಜೆಯಿಟ್ಟಿದೆ. ಅದರಂತೆ, ಸಿಜೆಐ ನೇತೃತ್ವದ ಕೊಲೀಜಿಯಂ ಸುಪ್ರೀಂ ಕೋರ್ಟ್‍ನಲ್ಲಿ 5 ಹಾಗೂ ಹೈಕೋಟ್ರ್ ಗಳ 400 ಹುದ್ದೆಗಳನ್ನು ಭರ್ತಿ ಮಾಡಲಿದೆ.
2014ರ ಅಂತ್ಯದಿಂದ ಅಂದರೆ ಎನ್‍ಡಿಎ ಸರ್ಕಾರವು ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್ ಜೆಎಸಿ) ರಚಿಸಲು ಸಿದ್ಧತೆ ನಡೆಸಿದಾಗಿನಿಂದ ಉನ್ನತ ನ್ಯಾಯಾಂಗಕ್ಕೆ ಯಾವುದೇ ನೇಮಕ ಪ್ರಕ್ರಿಯೆ ನಡೆದಿರಲಿಲ್ಲ. ಜಡ್ಜ್ ಗಳ ಆಯ್ಕೆ ಮತ್ತು ನೇಮಕದಲ್ಲಿ ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಎನ್‍ಜೆಎಸಿ ತರಲು ಮುಂದಾಗಿತ್ತು.
ಆದರೆ, ಇದನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಸುಪ್ರೀಂ ಕೋರ್ಟ್, ಎನ್ ಜಿಎಸಿಯನ್ನೇ ರದ್ದು ಮಾಡಿ ಆದೇಶ ಹೊರಡಿಸಿತ್ತು. ಕಳೆದ ವಾರ ಐವರು ಸದಸ್ಯರ ಕೊಲೀಜಿಯಂ(ಮುಖ್ಯ ನ್ಯಾಯಾ ಮೂರ್ತಿ ಟಿ ಎಸ್ ಠಾಕೂರ್, ನ್ಯಾಯಮೂರ್ತಿಗಳಾದ ಎ ಆರ್ ದವೆ, ಜೆ ಎಸ್ ಖೆಹರ್, ದೀಪಕ್ ಮಿಶ್ರಾ ಮತ್ತು ಜೆ ಚಲಮೇಶ್ವರ್) ಸಭೆ ಸೇರಿತ್ತು.
ಈ ವೇಳೆ, ಕೇಂದ್ರ ಸರ್ಕಾರವು ನ್ಯಾಯಾಧೀಶರ ಅರ್ಹತಾ ಮಾನದಂಡ ನಿರ್ಧರಿಸುವಂತಹ ಹೊಸ ಮೆಮೊರಂಡಂ ಆಫ್ ಪ್ರೊಸೀಜರ್(ಎಂಒಪಿ) ಅನ್ನು ಸಿದ್ಧಪಡಿಸುವವರೆಗೆ ಕಾಯದೇ, ನ್ಯಾಯಾಧೀಶರ ನೇಮಕ ಪ್ರಕ್ರಿಯೆ ಆರಂಭಿಸೋಣ ಎಂಬ ನಿರ್ಧಾರಕ್ಕೆ ಬರಲಾಯಿತು. ಜತೆಗೆ, ನೇಮಕ ವಿಳಂಬದಿಂದಾಗಿ ಹಲವು ಕೇಸುಗಳು ಇತ್ಯರ್ಥವಾಗಲೇ ಉಲಿದಿರುವುದನ್ನೂ ಪರಿಗಣಿಸಿ ಹೈಕೋರ್ಟ್‍ಗಳಿಗೆ 400 ಮತ್ತು ಸುಪ್ರೀಂಗೆ ಐವರು ನ್ಯಾಯಾಧೀಶರನ್ನು ನೇಮಕ ಮಾಡಲು ನಿರ್ಧರಿಸಲಾಯಿತು ಎಂದು ``ಹಿಂದುಸ್ಥಾನ್ ಟೈಮ್ಸ್''ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


