ಬೆಂಗಳೂರಲ್ಲಿ ಕೆಲಸ ತಪ್ಪಿದ್ದಕ್ಕೆ ಬಿಎಂಪಿಗೆ 1.5 ಕೋಟಿ ಪರಿಹಾರ ಕೇಳಿದ
ವಾಣಿಜ್ಯ ನಗರದ ವಿಜಯ್ ಹಿಂಗ್ರೋಣಿ ಬೃಹತ್ ಮುಂಬೈ ಪಾಲಿಕೆ ವಿರುದ್ಧ ರು. 1.5 ಕೋಟಿ ಪರಿಹಾರ ಕೊಡಬೇಕೆಂದು ಕೇಸು ಹಾಕಿದ್ದಾರೆ...

ಮುಂಬೈ: ವಾಣಿಜ್ಯ ನಗರದ ವಿಜಯ್ ಹಿಂಗ್ರೋಣಿ ಬೃಹತ್ ಮುಂಬೈ ಪಾಲಿಕೆ ವಿರುದ್ಧ ರು. 1.5 ಕೋಟಿ ಪರಿಹಾರ ಕೊಡಬೇಕೆಂದು ಕೇಸು ಹಾಕಿದ್ದಾರೆ. ಬೆಂಗಳೂರಿನ ಕಂಪನಿಯೊಂದರಲ್ಲಿ ಅವರಿಗೆ ಬಿಸಿನೆಸ್ ಅನಲಿಸ್ಟ್ ಆಗಿ ಕೆಲಸ ಸಿಕ್ಕಿತ್ತು. ಇದೇ ಸಂಭ್ರಮದಲ್ಲಿ ಅವರು ಬೆಂಗಳೂರಿಗೆ ಬರಲೆಂದು ಮುಂಬೈನ ಕಾರ್ಟೆರ್ ರಸ್ತೆಯಲ್ಲಿ ಆಗಮಿಸುತ್ತಿದ್ದಾಗ ತೆರದಿದ್ದ ಮ್ಯಾನ್ ಹೋಲ್ ಗೆ ಬಿದ್ದರು. ಪರಿಣಾಮ ಅವರ ಕಾಲು ಮುರಿಯಿತು. ಹೀಗಾಗಿ ಅವರಿಗೆ ನಿಗದಿತ ಅವಧಿಯಲ್ಲಿ ಕೆಲಸಕ್ಕೆ ಸೇರಲು ಆಗಲಿಲ್ಲ. ಇದರಿಂದಾಗಿ ಅವರಿಗೆ ತಿಂಗಳಿಗೆ ರು. 2.5 ಲಕ್ಷ ವೇತನದ ಉದ್ಯೋಗ ತಪ್ಪಿ ಹೋಯಿತು. ಇದರಿಂದ ಕ್ರುದ್ಧಗೊಂಡ ಅವರು ಪಾಲಿಕೆ ವಿರುದ್ಧ ಕೇಸು ದಾಖಲಿಸಿದ್ದಾರೆ. ನನ್ನ ದುಸ್ಥಿತಿಗೆ ಪಾಲಿಕೆಯೇ ಕಾರಣ ಎಂದಿರುವ ಅವರು, ಪಾಲಿಕೆಯಿಂದ ರು. 1.5 ಕೋಟಿ ಪರಿಹಾರ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


