ಗಣರಾಜ್ಯ ದಿನದ ಪಥಸಂಚಲನಕ್ಕೆ ಫ್ರಾನ್ಸ್ ಪಡೆ ಸಾಥ್
ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ನಮ್ಮ ಸೇನಾಪಡೆ ಜತೆಗೆ ಫ್ರಾನ್ಸ್ ಸೇನಾಪಡೆ ಪಥಸಂಚಲನ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್...

ನವದೆಹಲಿ: ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಗಣರಾಜ್ಯೋತ್ಸವದಂದು ನಮ್ಮ ಸೇನಾಪಡೆ ಜತೆಗೆ ಫ್ರಾನ್ಸ್ ಸೇನಾಪಡೆ ಪಥಸಂಚಲನ ನಡೆಸಲಿದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ ಸ್ವ ಒಲಾಂದ್ ಈ ಬಾರಿಯ ನಮ್ಮ ಗಣರಾಜ್ಯೋತ್ಸವ ಅತಿಥಿ. ಇದೇ ಸಮಯದಲ್ಲಿ, ಜಂಟಿ ಸೇನಾಭ್ಯಾಸಕ್ಕಾಗಿ ಫ್ರಾನ್ಸ್ ಸೇನಾಪಡೆ ಭಾರತಕ್ಕೆ ಬರಲಿದ್ದು, ನಮ್ಮ ಯೋಧರೊಂದಿಗೆ ಪಥಸಂಚಲನ ನಡೆಸಲು ಫ್ರಾನ್ಸ್ ಸೈನಿಕರು ಸಿದ್ಧರಾಗಿದ್ದಾರೆ. 2009ರಲ್ಲಿ ಭಾರತವೂ ಫ್ರಾನ್ಸ್‍ನಲ್ಲಿ ಇಂತಹುದೇ ಪಥಸಂಚಲನ ನಡೆಸಿತ್ತು. ಫ್ರೆಂಚ್ ಕ್ರಾಂತಿ ಆರಂಭವಾದ ನೆನಪಿನಲ್ಲಿ ನಡೆದ ಬ್ಯಾಸ್ಟಿಲೆ ಡೇ ಎಂಬ ಕಾರ್ಯಕ್ರಮದಲ್ಲಿ ಭಾರ ತದ ಅತಿ ಹಳೆಯ ರೆಜಿಮೆಂಟ್ ದಿ ಮರಾಠಾ ಲೈಟ್ ಇನ್ ಫೆಂಟ್ರಿಯು ಫ್ರಾನ್ಸ್‍ಗೆ ತೆರಳಿ, ಅಲ್ಲಿನ ಯೋಧರಿಗೆ ಪಥಸಂಚಲನದಲ್ಲಿ ಸಾಥ್ ನೀಡಿತ್ತು. ಆಗ ಪ್ರಧಾನಿಯಾಗಿದ್ದ ಮನಮೋ ಹನ್‍ಸಿಂಗ್ ಪ್ಯಾರಿಸ್‍ನಲ್ಲೇ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


