ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸುವುದಿಲ್ಲ: ನೋಬೆಲ್ ಪ್ರಶಸ್ತಿ ವಿಜೇತ ರಾಮಕೃಷ್ಣನ್
ನೋಬೆಲ್ ವಿಜೇತ, ಭಾರತೀಯ ಸಂಜಾತ ವೆಂಕಟ್ರಾಮನ್ ರಾಮಕೃಷ್ಣನ್ ಇಂಡಿಯನ್ ಸಯನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು....

Published On :
ಚಂಡೀಗಢ: ನೋಬೆಲ್ ಪ್ರಶಸ್ತಿ ವಿಜೇತ, ಭಾರತೀಯ ಸಂಜಾತ ವೆಂಕಟ್ರಾಮನ್ ರಾಮಕೃಷ್ಣನ್ ಇಂಡಿಯನ್ ಸಯನ್ಸ್ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ನಿರಾಕರಿಸಿದ್ದಾರೆ.
ಈ ಹಿಂದೆ ಸಮಾವೇಶದಲ್ಲ್ಲಿ ಭಾಗವಹಿಸಿದ್ದ ವೆಂಕಟ್ರಾಮನ್, ಅದರಲ್ಲಿ ಕೆಲವೇ ಕೆಲವು ಹೊತ್ತು ವಿಜ್ಞಾನ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಅದೊಂದು ಸರ್ಕಸ್. ಆದ್ದರಿಂದ ನಾನು ಇನ್ಮುಂದೆ ಇಂಥಾ ಸಮಾವೇಶಗಳಲ್ಲಿ ಭಾಗವಹಿಸುವುದಿಲ್ಲ ಎಂದಿದ್ದಾರೆ.
ವಿಜ್ಞಾನದೊಂದಿಗೆ ರಾಜಕೀಯ ಮತ್ತು ಧಾರ್ಮಿಕ ನಂಬಿಕೆಗಳನ್ನು ಬೆಸೆಯುವುದಕ್ಕೆ ಕಳೆದ ವರ್ಷವೇ ರಾಮಕೃಷ್ಣನ್ ವಿರೋಧ ಸೂಚಿಸಿದ್ದರು.
ಈ ಬಾರಿ ವಾರ್ಷಿಕ ಸಮಾವೇಶ ಜನವರಿ 3 ರಿಂದ 7 ರ ವರೆಗೆ ಮೈಸೂರಿನಲ್ಲಿ ನಡೆಯುತ್ತಿದೆ.
ತಮಿಳ್ನಾಡು ಮೂಲದ ವೆಂಕಟ್ರಾಮನ್ ಕ್ಯಾಂಬ್ರಿಡ್ಜ್ ವಿಶ್ವ ವಿದ್ಯಾನಿಲಯದಲ್ಲಿ ಸ್ಟ್ರಕ್ಚರಲ್ ಬಯಾಲಜಿಸ್ಟ್ ಆಗಿದ್ದು, 2009ರಲ್ಲಿ ನೋಬೆಲ್ ಪ್ರಶಸ್ತಿ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Science CongressCircusVenkatraman Ramakrishnanವೆಂಕಟ್ರಾಮನ್ ರಾಮಕೃಷ್ಣನ್ಇಂಡಿಯನ್ ಸಯನ್ಸ್ ಕಾಂಗ್ರೆಸ್ನೋಬೆಲ್ ಪ್ರಶಸ್ತಿ ಪ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


