ಜಂಟಿ ಅಧಿವೇಶನಕ್ಕೆ ಸಿದ್ಧವಿತ್ತು
ಜಿಎಸ್‍ಟಿ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಜಂಟಿ ಅಧಿವೇಶನ ನಡೆಸಲು ಸಿದ್ಧವಿತ್ತು ಎಂದು ಸಂಸದೀಯ ವ್ಯವಹಾರಗಳ...

Published On :
ಚೆನ್ನೈ: ಜಿಎಸ್‍ಟಿ ಮಸೂದೆ ಅಂಗೀಕಾರಕ್ಕೆ ಕೇಂದ್ರ ಸರ್ಕಾರ ಜಂಟಿ ಅಧಿವೇಶನ ನಡೆಸಲು ಸಿದ್ಧವಿತ್ತು ಎಂದು ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಚೆನ್ನೈನಲ್ಲಿ ಮಾತನಾಡಿದ ಅವರು, `` ಜಿಎಸ್‍ಟಿ ಮಸೂದೆ ಅಂಗೀಕರಿಸಲು ಸರ್ಕಾರ ವಿರೋಧಿಸಿರಲಿಲ್ಲ. ಪ್ರತಿಪಕ್ಷಗಳ ವಿಶ್ವಾಸ ಗಳಿಸಿ, ಮಸೂದೆಗೆ ಅಂಗೀಕರ ಪಡೆಯುವ ಮೂಲಕ ನಾವು ಹೊಸದೊಂದು ಮೈಲಿಗಲ್ಲು ಸ್ಥಾಪಿಸಲು ಹೊರಟಿದ್ದೆವು.
ಮಸೂದೆ ಕುರಿತು ಪುನರ್ ಚರ್ಚೆ ಮಾಡಲು ಕಾಂಗ್ರೆಸ್ ಒಪ್ಪಿದ್ದರೆ ವಿಶೇಷ ಅಧಿವೇಶನ ನಡೆಸಲೂ ಸಿದ್ಧವಾಗಿದ್ದೆವು. ಆದರೆ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಗದ್ದಲವುಂಟು ಮಾಡುವ ಮೂಲಕ ಮಸೂದೆ ಅಂಗೀಕರಿಸಲು ಅಡ್ಡಿಪಡಿಸಿತು ಎಂದು ಅವರು ದೂರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


