ಛತ್ತೀಸ್ಗಢದಲ್ಲಿ ಮೂವರು ಯುವಕರನ್ನು ಅಪಹರಿಸಿದ ನಕ್ಸಲರು
ಶಾಂತಿ ಸಂದೇಶ ಸಾರಲು ಪುಣೆ ಮೂಲಕ ಸೈಕಲ್ ರ್ಯಾಲಿ ಕೈಗೊಂಡಿದ್ದ ಮೂವರು ಯುವಕರನ್ನು ಚತ್ತೀಸ್ ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದಾರೆ.

ರಾಯ್ ಪುರ: ಶಾಂತಿ ಸಂದೇಶ ಸಾರಲು ಪುಣೆ ಮೂಲಕ ಸೈಕಲ್ ರ್ಯಾಲಿ ಕೈಗೊಂಡಿದ್ದ ಮೂವರು ಯುವಕರನ್ನು ಛತ್ತೀಸ್ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಕ್ಸಲರು ಅಪಹರಿಸಿದ್ದಾರೆ.
ಮಹಾರಾಷ್ಟ್ರ- ಬಿಜಾಪುರ್ ಜಿಲ್ಲೆಯ ಗಡಿ ಪ್ರದೇಶದಲ್ಲಿರುವ ಮಹಾರಾಷ್ಟ್ರ ಗಡಿಯ ಬಿಜಾಪುರ ವಲಯದ ಬಸಗುಡ ಅರಣ್ಯದಿಂದ ವಿದ್ಯಾರ್ಥಿಗಳನ್ನು ಅಪಹರಿಸಲಾಗಿದೆ ಎಂಬ ಮಾಹಿತಿ ಇದೆ. ಕೆಲ ದಿನಗಳ ಹಿಂದೆ ಕುತ್ರುವಿನಲ್ಲಿ ಅವರು ಸ್ಥಳೀಯರಿಗೆ ಕಡೆಯದಾಗಿ ಕಾಣಲು ಸಿಕ್ಕಿದ್ದರು ಎಂದು ಬಸ್ತಾರ್ ವಲಯದ ಐಜಿಪಿ ಎಸ್ಆರ್ಪಿ ಕಲ್ಲೂರಿ ಹೇಳಿದರು. ಡಿ.20 ರಂದು ಸೈಕಲ್ ರ್ಯಾಲಿ ಪ್ರಾರಂಭಿಸಿದ್ದ ಯುವಕರು ಕೆಲ ದಿನಗಳ ಹಿಂದೆ ಕುತ್ರುವಿನಲ್ಲಿ ಅವರು ಸ್ಥಳೀಯರಿಗೆ ಕಡೆಯದಾಗಿ ಕಾಣಲು ಸಿಕ್ಕಿದ್ದರು ಎಂದು ಬಸ್ತಾರ್ ವಲಯದ ಐಜಿಪಿ ಎಸ್ಆರ್ಪಿ ಕಲ್ಲೂರಿ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಈ ವಿದ್ಯಾರ್ಥಿಗಳನ್ನು ಆದರ್ಶ ಪಾಟೀಲ್, ವಿಲಾ ವಲಕೆ ಮತ್ತು ಶ್ರೀಕಿರ್ಹನ ಶೆಲವಲೆ ಎಂಬುದಾಗಿ ಗುರುತಿಸಲಾಗಿದೆ. ‘ಭಾರತ್ ಜೋಡೋ’ ಕಾರ್ಯಕ್ರಮದ ಅಂಗವಾಗಿ ಈ ವಿದ್ಯಾರ್ಥಿಗಳ ಸೈಕಲ್ ಯಾತ್ರೆ ಹೊರಟಿದ್ದರು.
ಇತ್ತೀಚಿನ ವರದಿಗಳ ಪ್ರಕಾರ ಛತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲೀಯರಿಂದ ಅಪಹರಣಗೊಂಡಿದ್ದ ಪುಣೆಯ ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


