ರೋಹಿತ್ ವೆಮುಲಾ ಕುಟುಂಬದ ಬಗ್ಗೆ ಸ್ಮೃತಿ ಇರಾನಿಗೆ ಸಂವೇದನೆ ಇಲ್ಲ: ಹೈದರಾಬಾದ್ ವಿವಿ ಪ್ರಾಧ್ಯಾಪಕರು
ಸ್ಮೃತಿ ಇರಾನಿ ರೋಹಿತ್ ವೇಮುಲಾ ಕುಟುಂಬದ ಬಗ್ಗೆ ಸಂವೇದನೆ ಹೊಂದಿಲ್ಲ ಎಂದು ಹೈದರಾಬಾದ್ ವಿವಿ ಪ್ರಾಧ್ಯಾಪಕರು ಆರೋಪಿಸಿದ್ದಾರೆ.

ಹೈದರಾಬಾದ್: ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈದರಾಬಾದ್ ವಿವಿ ಯ ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಹಾಗೂ ಪ್ರಾಧ್ಯಾಪಕರು ಸ್ಮೃತಿ ಇರಾನಿ ರೋಹಿತ್ ವೇಮುಲಾ ಕುಟುಂಬದ ಬಗ್ಗೆ ಸಂವೇದನೆ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ನ್ಯಾಯ ಹಾಗೂ ಸತ್ಯವನ್ನು ನಿರೀಕ್ಷಿಸುತ್ತಿದ್ದೇವೆ ಹೊರತು ಭಾವಾತಿರೇಕದ ವರ್ತನೆಯನ್ನಲ್ಲ. ಪ್ರಾಧ್ಯಾಪಕರು ಹಾಗೂ ಸಚಿವರು ಸತ್ಯ, ಸಮಾನತೆ, ನ್ಯಾಯ, ಭರವಸೆ, ಮತ್ತು ಸ್ಫೂರ್ತಿಯನ್ನು ನೀಡಬೇಕೆ ಹೊರತು ಭಾವಾತಿರೇಕದ ವರ್ತನೆ ತೋರುವುದು ಸರಿಯಲ್ಲ ಎಂದು ಶಿಕ್ಷಕರ ವೇದಿಕೆ ಸ್ಮೃತಿ ಇರಾನಿಗೆ ಬರೆದ ಪತ್ರದಲ್ಲಿ ಹೇಳಿದೆ.
ವೇಮುಲ ಪ್ರಕರಣದಲ್ಲಿ ಸ್ಮೃತಿ ಇರಾನಿ ನಿರ್ದೋಷಿಯೆಂದು ಹೇಳಿರುವ ಶಿಕ್ಷಕರ ವೇದಿಕೆ, ಸಂಸತ್ ನ ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥನೆ ಮಾಡಿದ್ದಾರೆ ಎಂದು ಸ್ಮೃತಿ ಇರಾನಿ ವಿರುದ್ಧ ಆರೋಪಿಸಿದೆ. ಭಾಷಣದಲ್ಲಿ ತಪ್ಪು ಮಾಹಿತಿಗಳನ್ನು ಸಮರ್ಥಿಸುವುದು ಮಾತ್ರವಲ್ಲದೇ ಸ್ಮೃತಿ ಇರಾನಿ ಅವರು ಮುಲಾ ಕುಟುಂಬದ ಬಗ್ಗೆ ಸಂವೇದನೆ ಇಲ್ಲದಂತೆ ನಡೆದುಕೊಂಡಿದ್ದಾರೆ ಎಂದು ಎಸ್ ಸಿ / ಎಸ್ ಟಿ ಶಿಕ್ಷಕರ ವೇದಿಕೆ ಪತ್ರದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


