ದೇಶ

ಜವಹರ್ ಲಾಲ್ ನೆಹರು ವಿವಿಗೆ ಸುಭಾಷ್ ಚಂದ್ರ ಬೋಸ್ ವಿವಿ ಎಂದು ಹೆಸರಿಡಿ: ಸುಬ್ರಮಣಿಯನ್ ಸ್ವಾಮಿ

ವಿವಾದದ ಕೇಂದ್ರಬಿಂದುವಾಗಿರುವ ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯಕ್ಕೆ ಸುಭಾಷ್ ಚಂದ್ರ ಬೋಸ್ ವಿವಿ ಎಂದು ಮರು ನಾಮಕರಣ ಮಾಡಬೇಕು ..

ಜವಹರ್ ಲಾಲ್ ನೆಹರು ವಿವಿಗೆ ಸುಭಾಷ್ ಚಂದ್ರ ಬೋಸ್ ವಿವಿ ಎಂದು ಹೆಸರಿಡಿ: ಸುಬ್ರಮಣಿಯನ್ ಸ್ವಾಮಿ
ಸುಬ್ರಮಣಿಯನ್ ಸ್ವಾಮಿ
Published On :

ಕಾನ್ಪುರ: ವಿವಾದದ ಕೇಂದ್ರಬಿಂದುವಾಗಿರುವ ಜವಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯಕ್ಕೆ ಸುಭಾಷ್ ಚಂದ್ರ ಬೋಸ್ ವಿವಿ ಎಂದು ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ  ಮುಖಂಡ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ.

ಜವಹರ್ ಲಾಲ್ ನೆಹರು ವಿಶ್ವ ವಿದ್ಯಾನಿಲಯವನ್ನು ಶುದ್ದೀಕರಿಸಬೇಕು ಎಂದು ಹೇಳಿರುವ ಸ್ವಾಮಿ, ಅಂತಿಮ ಪರೀಕ್ಷೆ ಮುಗಿದ ನಂತರ ಜೆಎನ್ ಯು ವಿವಿಯನ್ನು ನಾಲ್ಕು ತಿಂಗಳ ಕಾಲ ಮುಚ್ಚಬೇಕು ಎಂದಿ ಸ್ವಾಮಿ ಹೇಳಿದ್ದಾರೆ. ಭಾರತೀಯ ಸಂವಿಧಾನಕ್ಕೆ ಬದ್ದರಾಗಿ ನಡೆದುಕೊಳ್ಳದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ಗಳಿಂದ ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.

ಇನ್ನೂ ಜಿಹಾದಿಗಳು, ನಕ್ಸಲೈಟ್ಸ್, ಎಲ್ ಟಿಟಿಇ ಭಯೋತ್ಪಾದಕರು ಎಂಬುದು ದಾಖಲೆಗಳಲ್ಲಿ ಸಾಬೀತಾದರೇ ಅಂಥವರನ್ನು ವಿವಿಯಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ.ಅವಧಿ ಮುಗಿದರೂ ಪದವಿ ಪಡೆಯದೇ ಇರುವ ವಿದ್ಯಾರ್ಥಿಗಳನ್ನು ಕ್ಯಾಂಪಸ್ ನಿಂದಲೇ ಉಚ್ಚಾಟಿಸಬೇಕು ಎಂದಿ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.