ಮೋದಿ ಸರ್ಕಾರಕ್ಕೆ ನನ್ನನ್ನು ಕಂಡರೆ ಭಯ: ರಾಹುಲ್ ಗಾಂಧಿ
ನಾನು ಸಂಸತ್‌ನಲ್ಲಿ ಮಾತಾಡಬಲ್ಲೆ, ಆದರೆ ಕೇಂದ್ರ ಸರ್ಕಾರಕ್ಕೆ ನನ್ನನ್ನು ಕಂಡರೆ ಭಯ. ನಾನು ಸಂಸತ್‌ನಲ್ಲಿ ಹೇಳುತ್ತೇನೋ ಎಂಬ ಭಯ...

Published On :
ನವದೆಹಲಿ: ನಾನೆಂದರೆ ಕೇಂದ್ರ ಸರ್ಕಾರಕ್ಕೆ ಭಯ. ಆದ್ದರಿಂದಲೇ ನಾನು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿನ ಘಟನೆಯ ಬಗ್ಗೆ ಸಂಸತ್‌ನಲ್ಲಿ ದನಿಯೆತ್ತುವಾಗ ಅದನ್ನು ತಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಸಂಸತ್‌ನಲ್ಲಿ ಮಾತಾಡಬಲ್ಲೆ, ಆದರೆ ಕೇಂದ್ರ ಸರ್ಕಾರಕ್ಕೆ ನನ್ನನ್ನು ಕಂಡರೆ ಭಯ. ನಾನು ಸಂಸತ್‌ನಲ್ಲಿ ಹೇಳುತ್ತೇನೋ ಎಂಬ ಭಯ ಅವರಿಗಿದೆ. ಆದ್ದರಿಂದಲೇ ಅವರು ನನಗೆ ಮಾತನಾಡಲು ಬಿಡುವುದಿಲ್ಲ ಎಂದು ಮಾಧ್ಯಮದವರಲ್ಲಿ ಮಾತನಾಡಿದ ರಾಹುಲ್ ಹೇಳಿದ್ದಾರೆ.
ಆದರೆ ಲೋಕಸಭೆಯಲ್ಲಿ ನಡೆದದ್ದು ಬೇರೆಯೇ ಆಗಿತ್ತು. ಜ್ಯೋತಿರಾದಿತ್ಯ ಸಿಂಧ್ಯಾ ಅವರು ಜೆಎನ್‌ಯು ವಿವಾದ ಮತ್ತು ರೋಹಿತ್ ಮೆಮುಲಾ ಆತ್ಮಹತ್ಯೆ ಬಗ್ಗೆ ಚರ್ಚೆ ಆರಂಭಿಸಿದಾಗ ರಾಹುಲ್ ಅವರ ಸೀಟಿನಲ್ಲಿ ಮೌನವಾಗಿಯೇ ಕುಳಿತಿದ್ದರು. ಅಷ್ಟೇ ಅಲ್ಲ ಈ ಎರಡು ವಿಷಯಗಳ ಚರ್ಚೆಗೆ ಸ್ಮೃತಿ ಇರಾನಿ ಉತ್ತರಿಸುವಾಗ ರಾಹುಲ್ ಮತ್ತು ಸಿಂಧ್ಯಾ ಇಬ್ಬರೂ ಸಂಸತ್‌ನಲ್ಲಿ ಹಾಜರಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಸ್ಮೃತಿ ಇರಾನಿJawaharlal Nehru UniversityRahul Gandhiರಾಹುಲ್ ಗಾಂಧಿsedition rowಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


