ರಾಜ್ಯಸಭೆ ಬದಲು ಲೋಕಸಭೆಗೆ ಹೋದ ಮಣಿಶಂಕರ್ ಅಯ್ಯರ್!
ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಮಣಿಶಂಕರ್ ಅಯ್ಯರ್ ರಾಜ್ಯಸಭೆ ಹೋಗುವ ಬದಲು ಲೋಕಸಭೆಗೆ ಹೋಗಿ ಎಲ್ಲರ ಹುಬ್ಬೇರಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯ ಮಣಿಶಂಕರ್ ಅಯ್ಯರ್ ರಾಜ್ಯಸಭೆ ಹೋಗುವ ಬದಲು ಲೋಕಸಭೆಗೆ ಹೋಗಿ ಎಲ್ಲರ ಹುಬ್ಬೇರಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿರಬೇಕಾದರೆ ಸದನದ ಕೊನೆಯ ಸಾಲಿನಲ್ಲಿ ಮಣಿಶಂಕರ್ ಅಯ್ಯರ್ ನಿಂತಿರುವುದು ಕಂಡು ಹಲವರು ಅಚ್ಚರಿಗೊಳಗಾಗಿದ್ದಾರೆ. ಲೋಕಸಭೆಯ ಆಪ್ತ ಸಹಾಯಕರ ಬಳಿ ಏನನ್ನೋ ಕೇಳಿದ ಮಣಿಶಂಕರ್ ಅಯ್ಯರ್ ತಕ್ಷಣವೇ ಅಲ್ಲಿಂದ ನಿರ್ಗಮಿಸಿದ್ದಾರೆ.
ಮತ್ತೆ ಕೆಲವು ನಿಮಿಷಗಳಾದ ಮೇಲೆ ಲೋಕಸಭೆಯ ಮತ್ತೊಂದು ಪ್ರವೇಶ ದ್ವಾರದ ಬಳಿ ಕಾಣಿಸಿಕೊಂಡಿದ್ದಾರೆ, ಆದರೆ ಈ ಬಾರಿ ಅವರು ಲೋಕಸಭೆಗೆ ಹೋಗಲಿಲ್ಲ, ಮತ್ತೊಮ್ಮೆ ಆಪ್ತಸಹಾಯಕರ ಬಳಿ ಮಾತನಾಡಿ ಅಲ್ಲಿಂದ ನಿರ್ಗಮಿಸಿದ ಘಟನೆ ಇಂದಿನ ಸಂಸತ್ ಕಲಾಪದ ಸ್ವಾರಸ್ಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


