ಭರ್ಜರಿ ಮಾರಾಟದೊಂದಿಗೆ ಲಿಮ್ಕಾ ದಾಖಲೆ ಸೇರಿದ ಸಚಿನ್ ಆತ್ಮಚರಿತ್ರೆ
ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬರೆದಿದ್ದ ಆತ್ಮಚರಿತ್ರೆ 'ಪ್ಲೆಯಿಂಗ್ ಇಟ್ ಮೈ ವೇ' ಪುಸ್ತಕ ಕಾಲ್ಪನಿಕ ಹಾಗೂ ಕಾಲ್ಪನಿಕವಲ್ಲದ ವಿಭಾಗದಲ್ಲಿ ಲಿಮ್ಕಾ...

ನವದೆಹಲಿ: ಭಾರತದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಬರೆದಿದ್ದ ಆತ್ಮಚರಿತ್ರೆ 'ಪ್ಲೆಯಿಂಗ್ ಇಟ್ ಮೈ ವೇ' ಪುಸ್ತಕ ಕಾಲ್ಪನಿಕ ಹಾಗೂ ಕಾಲ್ಪನಿಕವಲ್ಲದ ವಿಭಾಗದಲ್ಲಿ ಲಿಮ್ಕಾ ದಾಖಲೆ ಪುಸ್ತಕ ಸೇರಿದೆ.
ಹ್ಯಾಚೆಟ್ಟೆ ಇಂಡಿಯಾ 2014ರ ನವೆಂಬರ್ 6 ರಂದು ಪುಸ್ತಕವನ್ನು ಹೊರತಂದಿತ್ತು. ಅಂದಿನಿಂದ ಇಂದಿನವರೆಗೂ ಸುಮಾರು 1,50,289 ಪ್ರತಿಗಳು ಮಾರಾಟವಾಗಿ ಲಿಮ್ಕಾ ದಾಖಲೆ ಪುಸ್ತಕ ಸೇರಿದೆ.
ಸಚಿನ್ ತೆಂಡೂಲ್ಕರ್ ಅವರು ಆತ್ಮಚರಿತ್ರೆ ಪುಸ್ತಕಕ್ಕೆ ಬೋರಿಯಾ ಮಜುಂದಾರ್ ಸಹ ಬರಹಗಾರರಾಗಿದ್ದಾರೆ. ಪ್ಲೆಯಿಂಗ್ ಇಟ್ ಮೈ ವೇ ಪುಸ್ತಕದ ಬೆಲೆ 899 ರುಪಾಯಿಯಾಗಿದ್ದು, ಸುಮಾರು 13.51 ಕೋಟಿ ರುಪಾಯಿ ವಹಿವಾಟು ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


