ದೇಶ

ಆಗ್ರಾದ ವಿದ್ಯಾರ್ಥಿಯ ಪ್ರವೇಶ ಕಾರ್ಡ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಫೋಟೋ!

ಅರ್ಜುನ್ ಸಿಂಗ್ ಎಂಬ ವಿದ್ಯಾರ್ಥಿಗೆ ನೀಡಿದ ಪ್ರವೇಶ ಕಾರ್ಡ್‌ನಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಫೋಟೋ...

ಆಗ್ರಾದ ವಿದ್ಯಾರ್ಥಿಯ ಪ್ರವೇಶ ಕಾರ್ಡ್‌ನಲ್ಲಿ ಅರ್ಜುನ್ ತೆಂಡೂಲ್ಕರ್ ಫೋಟೋ!
ವಿದ್ಯಾರ್ಥಿಯ ಪ್ರವೇಶ ಕಾರ್ಡ್
Published On :
ಆಗ್ರಾ: ಇಲ್ಲಿನ ಕಾಲೇಜೊಂದರಲ್ಲಿ ಕಲಿಯುತ್ತಿರುವ ಅರ್ಜುನ್ ಸಿಂಗ್ ಎಂಬ ವಿದ್ಯಾರ್ಥಿಗೆ ನೀಡಿದ ಪ್ರವೇಶ ಕಾರ್ಡ್‌ನಲ್ಲಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಫೋಟೋ ಅಚ್ಚಾಗಿದೆ. 
ಅರ್ಜುನ್ ಸಿಂಗ್ ಅವರ ಅಡ್ಮಿಟ್ ಕಾರ್ಡ್ 0025488 ಆಗಿದ್ದು, ಜನ್ಮ ದಿನಾಂಕ 10/06/1996 ಆಗಿದೆ. ಆದರೆ ಅರ್ಜುನ್ ತೆಂಡೂಲ್ಕರ್‌ದ್ದು ಜನ್ಮ ದಿನಾಂಕ ಸೆಪ್ಟೆಂಬರ್ 22, 1996.
 ಅರ್ಜುನ್ ಸಿಂಗ್ ಅವರ ಪ್ರವೇಶ ಕಾರ್ಡ್‌ನಲ್ಲಿ  ಅಮ್ಮನ ಹೆಸರು ಶ್ರೀಮತಿ ದೇವಿ ಮತ್ತು ಅಪ್ಪನ ಹೆಸರು ರಾಮ್ನಿವಾಸ್ ಎಂದು ಅಚ್ಚಾಗಿದೆ. ಆದರೆ ವಿದ್ಯಾರ್ಥಿಯ ಫೋಟೋ ಮಾತ್ರ ಬದಲಾಗಿದೆ. 
 ಅಂಕೂರ್ ಇಂಟರ್ ಕಾಲೇಜ್ ದುರ್ಗಾ ನಗರ್ ವಿದ್ಯಾರ್ಥಿಯ ಕಾರ್ಡ್ ನಲ್ಲಿ  ಅರ್ಜುನ್ ತೆಂಡೂಲ್ಕರ್ ಫೋಟೋ ಆಗಿದ್ದು, ಆ ಕಾರ್ಡ್‌ನ್ನು ಸಹಿ ಹಾಕಿ ದೃಢೀಕರಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.