ದೇಶ

ಪಾಟಿಯಾಲಾ ಕೋರ್ಟ್ ನಲ್ಲಿ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ

ವಕೀಲರ ಎರಡು ಗುಂಪುಗಳು ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿ, ಪರಸ್ಪರ ಬಡಿದಾಡಿಕೊಂಡಿದ್ದಲ್ಲದೇ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ...

ಪಾಟಿಯಾಲಾ ಕೋರ್ಟ್ ನಲ್ಲಿ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ
ಪಟಿಯಾಲಾ ಹೌಸ್ ಕೋರ್ಟ್ ಆವರಣದಲ್ಲಿ ಪ್ರತಿಭಟನೆಯಲ್ಲಿ ನಿರತ ವಕೀಲರು
Published On :

ನವದೆಹಲಿ: ಪಟಿಯಾಲಾ ಹೌಸ್ ಕೋರ್ಟ್ ಇಂದು ಮತ್ತೊಮ್ಮೆ ಮತ್ತೊಂದು ಹೈಡ್ರಾಮಾಗೆ ಸಾಕ್ಷಿಯಾಯಿತು. ವಕೀಲರ ಎರಡು ಗುಂಪುಗಳು ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿ, ಪರಸ್ಪರ ಬಡಿದಾಡಿಕೊಂಡಿದ್ದಲ್ಲದೇ ಮತ್ತೆ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ.

ವಕೀಲರ ಒಂದು ಗುಂಪು ಕನ್ಹಯ್ಯ ಪರವಾಗಿ ಮತ್ತೊಂದು ಗುಂಪು ಕನ್ಹಯ್ಯ ವಿರೋಧವಾಗಿ ಘೋಷಣೆ ಕೂಗುತ್ತಿದ್ದರು. ಅಲ್ಲಿ ಏನಾಗಿದೆ ಎಂದು ನೋಡಲು ಪೊಲೀಸರು ಇದ್ದ ಸ್ಥಳದಲ್ಲೇ ಹೋದೆ. ಅಷ್ಟರಲ್ಲಿ ಕನ್ಹಯ್ಯ ವಿರೋಧಿ ಗುಂಪಿನ ವಕೀಲರೊಬ್ಬರು ನನ್ನ ಪೋಟೋ ತೆಗೆದು ಕೊಂಡು ನನಗೆ ಥಳಿಸಿದರು ಎಂದು ಆಂಗ್ಲ ಚಾನೆಲ್ ವರದಿಗಾರರು ಹೇಳಿದ್ದಾರೆ.

ವಕೀಲರಿಂದ ನನ್ನ ಮೇಲೆ ಹಲ್ಲೆ ನಡೆಯುತ್ತಿದ್ದರೂ ಪೊಲೀಸರು ಸುಮ್ಮನೆ ನೋಡುತ್ತಾ ನಿಂತಿದ್ದರೇ ಹೊರತು ನನ್ನನ್ನು ರಕ್ಷಿಸಲು ಬರಲಿಲ್ಲ ಎಂದು ಆರೋಪಿಸಿದ್ದಾರೆ. ನನ್ನನ್ನು ರಕ್ಷಿಸಿ ಎಂದು ಪದೇ ಪದೇ ಕೇಳಿಕೊಂಡರು ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ತಿಳಿಸಿದ್ದಾರೆ.

ರಾಷ್ಟ್ರದ್ರೋಹ ಆಪಾದನೆಯಲ್ಲಿ ಬಂಧಿತರಾಗಿರುವ ಕನ್ಹಯ್ಯ ಕುಮಾರ್ ಅವರನ್ನು ಎರಡು ದಿನಗಳ ಹಿಂದೆ ಹಾಜರು ಪಡಿಸುವ ವೇಳೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದ ಹೊರಗೆ ಸಂಭವಿಸಿದ ಹಿಂಸಾಚಾರಗಳ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದ್ದು. ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಕಠಿಣ ಮಾರ್ಗ ಸೂಚಿ ಅನುಸರಿಸುವಂತೆ ಸುಪ್ರೀಂ ಕೋರ್ಟ್ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.