ದೇಶ

ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯದ ಹಾದಿ ತಪ್ಪಿಸುತ್ತಿದ್ದಾರೆ!

ನಮಗೆ ಎಂದಿಗೂ ಒಬಿಸಿ ಕೋಟಾದಲ್ಲಿ ಮೀಸಲಾತಿ ಸಿಗುವುದೇ ಇಲ್ಲ. ಯಾಕೆಂದರೆ ನಾವು ಪಟೇಲ್‌ಗಳು ಈ ಮೀಸಲಾತಿ ಪಡೆಯುವುದಕ್ಕಾಗಿ ಯಾವುದೇ ಮಾನದಂಡ...

ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯದ ಹಾದಿ ತಪ್ಪಿಸುತ್ತಿದ್ದಾರೆ!
ಹಾರ್ದಿಕ್ ಪಟೇಲ್
Published On :
ಅಹ್ಮದಾಬಾದ್: ನಮಗೆ ಎಂದಿಗೂ ಒಬಿಸಿ ಕೋಟಾದಲ್ಲಿ ಮೀಸಲಾತಿ ಸಿಗುವುದೇ ಇಲ್ಲ. ಯಾಕೆಂದರೆ ನಾವು ಪಟೇಲ್‌ಗಳು ಈ ಮೀಸಲಾತಿ ಪಡೆಯುವುದಕ್ಕಾಗಿ ಯಾವುದೇ ಮಾನದಂಡಗಳನ್ನು ಹೊಂದಿಲ್ಲ. ಒಂದು ವೇಳೆ ನಮಗೆ ಮೀಸಲಾತಿ ಸಿಕ್ಕಿದರೂ ಬಾಕಿ ಉಳಿದ ಸಮುದಾಯಗಳು ನಮ್ಮ ವಿರುದ್ಧ ನಿಲ್ಲುತ್ತವೆ. ಆಗ ಅಲ್ಲಿ ವರ್ಗೀಯ ಕಲಾಪ ಉಂಟಾಗುತ್ತದೆ. ಸರ್ಕಾರ ನಮ್ಮನ್ನು ಯಾವತ್ತೂ ಒಬಿಸಿ ಕೆಟಗಿರಿಯಲ್ಲಿ ಸೇರಿಸುವುದಿಲ್ಲ ಎಂದು ಸರ್ದಾರ್ ಪಟೇಲ್ ಗ್ರೂಪ್‌ನ  ನೇತಾರ ಲಾಲ್‌ಜಿ ಪಟೇಲ್ ಹೇಳುತ್ತಾರೆ.
ಇದಕ್ಕೆ ಪಟೇಲ್ ಸಮುದಾಯದ ಇನ್ನೊಬ್ಬ ನಾಯಕ ಖೋಡಾಬಾಯಿ ಪಟೇಲ್, ಹಾಗಾದರೆ  ಹಾರ್ದಿಕ್ ಪಟೇಲ್ ಮೀಸಲಾತಿ ಹೆಸರಲ್ಲಿ ನಮ್ಮ ಸಮುದಾಯವನ್ನು ತಪ್ಪು ದಾರಿಗೆಳೆಯುತ್ತಿದ್ದಾರೆಯೇ? ಎಂದು ಕೇಳಿದಾಗ, ಲಾಲ್‌ಜಿ ಅದಕ್ಕೆ ಹೌದು ಎಂದು ಉತ್ತರಿಸುತ್ತಾರೆ.
ಇದು ಲಾಲ್‌ಜಿ ಪಟೇಲ್ (ಸರ್ದಾರ್ ಪಟೇಲ್ ಗ್ರೂಪ್ ಮುಖಂಡ) ಮತ್ತು ಖೋಡಾಬಾಯಿ ಪಟೇಲ್ ನಡುವಿನ ಸಂಭಾಷಣೆ. ಈ ಸಂಭಾಷಣೆಯ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 
ಲಾಲ್‌ಜಿ ಅವರ ಸರ್ದಾರ್ ಪಟೇಲ್ ಗ್ರೂಪ್ (ಎಸ್‌ಪಿಜಿ) ಮತ್ತು ಹಾರ್ದಿಕ್ ಪಟೇಲ್ ನೇತೃತ್ವದ  ಪಟೀದರ್ ಅನಮಂತ್ ಆಂದೋಲನ್ ಸಮಿತಿ (ಪಿಎಎಎಸ್) ಎಂಬೀ ಗುಂಪುಗಳು ತಮಗೆ ಮೀಸಲಾತಿ ನೀಡಬೇಕೆಂದು ಪ್ರತಿಭಟನೆ ನಡೆಸಿದ್ದವು. ಆದಾಗ್ಯೂ, ಹಾರ್ದಿಕ್ ಮತ್ತು ಆತನ ಗುಂಪಿನ ಸದಸ್ಯರನ್ನು ದೇಶದ್ರೋಹದ ಆರೋಪದಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ.
ಇದೀಗ ಈ ಪ್ರತಿಭಟನೆಯ ನಾಯಕತ್ವವನ್ನು ಲಾಲ್‌ಜಿ ವಹಿಸಿದ್ದಾರೆ.
ಆ ಆಡಿಯೋ ಕ್ಲಿಪ್‌ನಲ್ಲಿರುವ ಸಂಭಾಷಣೆ ಲಾಲ್‌ಜಿ ಪಟೇಲ್ ಅವರದ್ದೇ ಎಂದು ಎಸ್‌ಪಿಜಿ ದೃಢೀಕರಿಸಿದೆ. ವಾರಗಳ ಹಿಂದೆ ಖೋಡಾಬಾಯಿ ಅವರು ಲಾಲ್‌ಜಿಗೆ ಕರೆ ಮಾಡಿದ್ದರು ಎಂದು ಎಸ್‌ಪಿಜಿ ಹೇಳಿದ್ದಾರೆ.
ಏತನ್ಮಧ್ಯೆ,  ಹಾರ್ದಿಕ್ ಪಟೇಲ್ ಅವರು ಪಟೇಲ್ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಮಾತನ್ನು ಲಾಲ್‌ಜಿ ಅವರು ಬೆಂಬಲಿಸುತ್ತಿಲ್ಲ ಎಂದು ಎಸ್‌ಪಿಜಿ ವಕ್ತಾರ ಉರ್ವಿನ್ ಪಟೇಲ್ ಹೇಳಿದ್ದಾರೆ. ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಸಿಗುವುದಕ್ಕೆ ವಿಳಂಬವಾಗುತ್ತಿದೆ ಎಂದಷ್ಟೇ ಲಾಲ್‌ಜಿ ಮಾತಿನ ತಾತ್ಪರ್ಯ ಎಂದು ಉರ್ವಿನ್ ಸ್ಪಷ್ಟನೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.