ದೇಶ

ಶೀಘ್ರದಲ್ಲೇ ದೆಹಲಿ-ಮುಂಬೈ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಓಡಾಟ ಆರಂಭ

ಸ್ಪ್ಯಾನಿಶ್ ನಿರ್ಮಿತ ತಲ್ಗೊ ಹೈ ಸ್ಪೀಡ್ ರೈಲು ಶೀಘ್ರದಲ್ಲೇ ದೆಹಲಿ-ಮುಂಬೈ ಮಧ್ಯೆ ಪ್ರಾಯೋಗಿಕ ಓಡಾಟವನ್ನು ಆರಂಭಿಸಲಿದೆ...

ಶೀಘ್ರದಲ್ಲೇ ದೆಹಲಿ-ಮುಂಬೈ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಓಡಾಟ ಆರಂಭ
ತಲ್ಗೊ ರೈಲು
Published On :
ನವದೆಹಲಿ: ಸ್ಪ್ಯಾನಿಶ್ ನಿರ್ಮಿತ ತಲ್ಗೊ ಹೈ ಸ್ಪೀಡ್ ರೈಲು ಶೀಘ್ರದಲ್ಲೇ ದೆಹಲಿ-ಮುಂಬೈ ಮಧ್ಯೆ ಪ್ರಾಯೋಗಿಕ ಓಡಾಟವನ್ನು ಆರಂಭಿಸಲಿದೆ. ಈ ರೈಲು ಗಂಟೆಗೆ 160 ರಿಂದ 200 ಕಿ.ಮೀ.ವೇಗದಲ್ಲಿ ಚಲಿಸುತ್ತದೆ.
ಪ್ರಾಯೋಗಿಕ ಓಡಾಟ ಯಶಸ್ವಿಯಾದರೆ, ದೇಶದ ಇತರೆ ಭಾಗಗಳಲ್ಲೂ ಹೈ ಸ್ಪೀಡ್ ರೈಲನ್ನು ಓಡಿಸಲಾಗುವುದು ಎಂದು ರೇಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಲ್ಗೊ ಶೀಘ್ರದಲ್ಲೇ ದೆಹಲಿ-ಮುಂಬೈ ಕಾರಿಡಾರ್ ನಲ್ಲಿ ಸಮಯ ಆಧಾರಿತ ಓಡಾಟವನ್ನು ಆರಂಭಿಸಲಿದೆ ಎಂದು ಅವರು ಹೇಳಿದ್ದಾರೆ.
ಸ್ಪ್ಯಾನಿಶ್ ರೈಲು ನಿರ್ಮಾಣ ಕಂಪನಿಯೊಂದು ಪ್ರಾಯೋಗಿಕ ಓಡಾಟಕ್ಕಾಗಿ ಈ ತಲ್ಗೊ ರೈಲನ್ನು ಉಚಿತವಾಗಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.