ದೇಶ

ಅನಾರೋಗ್ಯ ಪೀಡಿತ ರೋಗಿಗಾಗಿ ತುರ್ತು ಟಿಕೆಟ್: ಟ್ವಿಟರ್ ಮನವಿಗೆ ಸ್ಪಂದಿಸಿದ ಸುರೇಶ್ ಪ್ರಭು

ಅನಾರೋಗ್ಯ ಪೀಡಿತರಾಗಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರ ಪ್ರಯಾಣಕ್ಕಾಗಿ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ತುರ್ತು ರೈಲ್ವೇ ಟಿಕೆಟ್ ಬುಕ್ ಮಾಡಿದ್ದಾರೆ...

ಅನಾರೋಗ್ಯ ಪೀಡಿತ ರೋಗಿಗಾಗಿ ತುರ್ತು ಟಿಕೆಟ್: ಟ್ವಿಟರ್ ಮನವಿಗೆ ಸ್ಪಂದಿಸಿದ ಸುರೇಶ್ ಪ್ರಭು
ಕೇಂದ್ರ ಸಚಿವ ಸುರೇಶ್ ಪ್ರಭು (ಸಂಗ್ರಹ ಚಿತ್ರ)
Published On :

ಬೆಂಗಳೂರು: ಟ್ವಿಟರ್ ನಲ್ಲಿ ಬಂದ ಮನವಿಗೆ ಸ್ಪಂದಿಸಿರುವ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು,ಅನಾರೋಗ್ಯ ಪೀಡಿತರಾಗಿ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯೊಬ್ಬರ ಪ್ರಯಾಣಕ್ಕಾಗಿ ತುರ್ತು ರೈಲ್ವೇ ಟಿಕೆಟ್ ಬುಕ್ ಮಾಡಿಸಿದ್ದಾರೆ...

ಗುರುವಾರ ತುರ್ತು ಸಭೆ ನಡೆಸಿದ ಕೇಂದ್ರ ಸಚಿವ ಸುರೇಶ್ ಪ್ರಭು ಅವರು, ತಮಗೆ ಒಂದು ಟ್ವೀಟ್ ಬಂದಿದ್ದು, ಅದರಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿದ್ದಾನೆ. ಪ್ರಸ್ತುತ ರೋಗಿ ದೆಹಲಿ ಏಮ್ಸ್  ಆಸ್ಪತ್ರೆಯಲ್ಲಿದ್ದು, ಕೂಡಲೇ ಆತನಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಹೀಗಾಗಿ ನಮಗೆ ತುರ್ತು ರೈಲ್ವೇ ಟಿಕೆಟ್ ಬೇಕಿದೆ. ದಯಮಾಡಿ ಸಹಾಯಮಾಡಿ ಎಂದು ಟ್ವೀಟ್ ಮಾಡಿದ್ದರು.  ಈ  ಸಂದೇಶವನ್ನು ನಾನು ಅಧಿಕಾರಿಗಳಿಗೆ ರವಾನಿಸಿದ್ದು, ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

ಮೂಲಗಳ ಪ್ರಕಾರ, ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಇತ್ತೀಚೆಗೆ ಸುರೇಶ್ ಪ್ರಭು ಅವರಿಗೆ ಒಂದು ಸಂದೇಶ ಬಂದಿದ್ದು, ಸಂದೇಶದಲ್ಲಿ ತಮ್ಮ ಸಂಬಂಧಿಕರಿಗೆ ಆರೋಗ್ಯ ಹದಗೆಟ್ಟಿದ್ದು, ಅವರು ಗಂಭೀರ  ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ರೈಲ್ವೇ ಟಿಕೆಟ್ ಬುಕ್ ಮಾಡಿಸುವ ಸಮಯ ಕೂಡ ಇಲ್ಲ. ಹೀಗಾಗಿ ತುರ್ತು ರೈಲ್ವೇ ಟಿಕೆಟ್ ಕೊಡಿಸುವಂತೆ ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಕೂಡಲೇ  ಸ್ಪಂದಿಸಿದ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಅವರು, ತಮ್ಮ ಅಧಿಕಾರಿಗಳ ಮುಖಾಂತರ ರೋಗಿಗೆ ತುರ್ತು ರೈಲ್ವೇ ಟಿಕೆಟ್ ಬುಕ್ ಮಾಡಿಸಿದ್ದಾರೆ.

ಅಷ್ಟೇ ಅಲ್ಲದೇ ರೋಗಿಯ ಆರೋಗ್ಯ ಮೇಲ್ವಿಚಾರಣೆಗಾಗಿ ರೈಲ್ವೇ ನಿಲ್ದಾಣಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಸ್ವತಃ ತಾವೇ ರಾತ್ರಿ 3 ಗಂಟೆಯವರೆಗೂ ರೋಗಿಯ ಪ್ರಯಾಣ ಮತ್ತು ಆರೋಗ್ಯ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.

ಇನ್ನು ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಸಹಾಯ ಕೋರಿದರೆ ಅವರಿಗೆ ಸೂಕ್ತ ರೀತಿಯಲ್ಲಿ ನೆರವಾಗುವಂತೆ ಮತ್ತು ಸಾಮಾಜಿಕ ತಾಣಗಳನ್ನು ಸರಿಯಾಗಿ ನಿರ್ವಹಿಸುವಂತೆ ಸಚಿವರು  ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಅನಾರೋಗ್ಯ ಪೀಡಿತ ರೋಗಿಗಾಗಿ ಸಚಿವ ಸುರೇಶ್ ಪ್ರಭು ತಮ್ಮ ಅಧಿಕಾರವನ್ನು ಬಳಸಿ ತುರ್ತು ಟಿಕೆಟ್ ಸಿಗುವಂತೆ  ಮಾಡಿದ್ದಲ್ಲದೇ ರಾತ್ರಿ ಮೂರು ಗಂಟೆಯವರೆಗೂ ನಿದ್ರೆ ಕೂಡ ಮಾಡದೇ ರೋಗಿಯ ಮೇಲ್ವಿಚಾರಣೆ ನಡೆಸಿದ್ದ ಸಾರ್ವಜನಿಕರಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.