ದೇಶ

ಜಯಾ ಸಾವು: ಮದ್ರಾಸ್ ಹೈಕೋರ್ಟ್ ತಮಿಳುನಾಡು ಜನತೆಯ ಅನುಮಾನವನ್ನು ಪ್ರತಿನಿಧಿಸುತ್ತಿದೆ- ಡಿಎಂಕೆ

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ತಮಿಳುನಾಡು ಜನತೆಗೆ ಇರುವ ಅನುಮಾನಗಳನ್ನು ಮದ್ರಾಸ್ ಹೈಕೋರ್ಟ್ ಪ್ರತಿನಿಧಿಸುತ್ತಿದೆ ಎಂದು ...

ಜಯಾ ಸಾವು: ಮದ್ರಾಸ್ ಹೈಕೋರ್ಟ್ ತಮಿಳುನಾಡು ಜನತೆಯ ಅನುಮಾನವನ್ನು ಪ್ರತಿನಿಧಿಸುತ್ತಿದೆ- ಡಿಎಂಕೆ
ಜಯಲಲಿತಾ
Published On :

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ಬಗ್ಗೆ ತಮಿಳುನಾಡು ಜನತೆಗೆ ಇರುವ ಅನುಮಾನಗಳನ್ನು ಮದ್ರಾಸ್ ಹೈಕೋರ್ಟ್ ಪ್ರತಿನಿಧಿಸುತ್ತಿದೆ ಎಂದು ಡಿಎಂಕೆ ಹೇಳಿದೆ,

ಜಯಲಲಿತಾ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಅಪೊಲೋ ಆಸ್ಪತ್ರೆ, ಅವರ ಅರೋಗ್ಯದ ಬಗ್ಗೆ ಸತ್ಯವಾದ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ನಿಖರವಾದ ಮಾಹಿತಿಯನ್ನು ನೀಡಲಿಲ್ಲ. ಜಯಾ ಆರೋಗ್ಯದ ಬಗ್ಗೆ ತಮಿಳುನಾಡು ಸರ್ಕಾರ ಒಂದೇ ಒಂದು ಪದ ಕೂಡ ಹೇಳಲಿಲ್ಲ. ಜಯಲಲಿತಾ ಆಸ್ಪತ್ರೆಗೆ ದಾಖಲಾದ ದಿನದಿಂದ ಎಲ್ಲವೂ ನಿಗೂಡವಾಗಿಯೇ ಇತ್ತು ಎಂದು ಡಿಎಂಕೆ ಮುಖಂಡ ಶರವಣನ್ ಹೇಳಿದ್ದಾರೆ.

ಅಪೋಲೋ ಆಸ್ಪತ್ರೆ 10 ಮೆಡಿಕಲ್ ಬುಲೆಟಿನ್ ಗಳನ್ನು ಬಿಡುಗಡೆ ಮಾಡಿತ್ತು ಒಂದು ಬುಲೆಟಿನ್ ನಲ್ಲಿ ಮಾತ್ರ ಅಪೋಲೋ ಆಸ್ಪತ್ರೆಯ ಮೆಡಿಕಲ್ ಸೇವೆಗಳ ನಿರ್ದೇಶಕಿ ಸತ್ಯ ಅವರ ಸಹಿ ಬಿಟ್ಟರೆ, ಉಳಿದ ಯಾವುದೇ ಹೆಲ್ತ್ ಬುಲೆಟಿನ್ ಗಳಲ್ಲಿ ವೈದ್ಯರ ಸಹಿ ಇರಲಿಲ್ಲ , ಎಲ್ಲಾ ಬುಲೆಟಿನ್ ಗಳಲ್ಲಿ ಆಸ್ಪತ್ರೆಯ ಸಿಇಓ ಸಹಿ ಮಾತ್ರ ಇತ್ತು, ಜಯಲಲಿತಾ ಗೆ ಚಿಕಿತ್ಸೆ ನೀಡುತ್ತಿದ್ದ ಸಂಬಂದಪಟ್ಟ ವೈದ್ಯರ ಸಹಿ ಇರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತು ಸ್ವತಃ ಮದ್ರಾಸ್ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದ್ದು, ಜಯಲಲಿತಾ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯಾಗಬಾರದೇಕೆ ಎಂದು ನಿನ್ನೆ ಪ್ರಶ್ನಿಸಿದೆ.

ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ಕುರಿತಂತೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ, ಮಾಧ್ಯಮಗಳು ವರದಿ ಅನೇಕ ಶಂಕೆಗಳನ್ನು ಮೂಡಿಸುತ್ತಿವೆ, ಈ ಹಿನ್ನೆಲೆಯಲ್ಲಿ  ನನಗೂ ಕೂಡ ಜಯಲಲಿತಾ ಸಾವಿನ ಬಗ್ಗೆ ಅನುಮಾನ ಮೂಡುತ್ತಿದೆ ಎಂದು ನ್ಯಾಯಮೂರ್ತಿ ಎಸ್. ವೈದ್ಯನಾಥನ್ ಹೇಳಿದ್ದರು.

ಜಯಲಲಿತಾ ಅವರ ಸಾವಿನ ಕುರಿತಂತೆ ಎಐಎಡಿಎಂಕೆ ಕಾರ್ಯಕರ್ತ ಜೋಸೆಫ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ವೈದ್ಯನಾಥನ್ ನಿನ್ನೆ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಬಾರದೇಕೆ ಎಂದು ಪ್ರಶ್ನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.