ದೆಹಲಿ: ಒಂದೇ ರನ್ ವೇ ನಲ್ಲಿ ಎರಡು ವಿಮಾನಗಳ ಮುಖಾಮುಖಿ; ತಪ್ಪಿದ ದುರಂತ!
ಗೋವಾ ರನ್ ವೇನಲ್ಲಿ ಜೆಟ್ ಏರ್ ವೇಸ್ ವಿಮಾನ ಜಾರಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಪ್ರಕರಣ ನಡೆದ ಬೆನ್ನಲ್ಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅಂತಹುದೇ ಘಟನೆ ನಡೆದಿದೆ.

ನವದೆಹಲಿ: ಗೋವಾ ರನ್ ವೇನಲ್ಲಿ ಜೆಟ್ ಏರ್ ವೇಸ್ ವಿಮಾನ ಜಾರಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಪ್ರಕರಣ ನಡೆದ ಬೆನ್ನಲ್ಲೇ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಅಂತಹುದೇ ಘಟನೆ ನಡೆದಿದೆ.
ದೆಹಲಿ ವಿಮಾನ ನಿಲ್ದಾಣದ ರನ್ ವೇನಲ್ಲಿ ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಪರಸ್ಪರ ಮುಖಾಮುಖಿಯಾಗಿದ್ದು, ಕೂದಲೆಳೆ ಅಂತರದಲ್ಲಿ ಸಂಭವಿಸಬಹುದಾಗಿದ್ದ ಭಾರಿ ದುರಂತವೊಂದು ತಪ್ಪಿದೆ. ಲಖನೌ ನಿಂದ ದೆಹಲಿಗೆ ಆಗಮಿಸಿದ್ದ ವಿಮಾನ ಸಂಖ್ಯೆ 6ಇ769 (ಪಿಎಎಕ್ಸ್-176) ಇಂಡಿಗೋ ವಿಮಾನ ರನ್ ವೇ ನಲ್ಲಿ ಇಳಿಯುತ್ತಿದ್ದ ಸಂದರ್ಭದಲ್ಲೇ ಹೈದರಾಬಾದ್ ಗೆ ತೆರಳುತ್ತಿದ್ದ ಎಸ್ ಜಿ-123 ಸ್ಪೈಸ್ ಜೆಟ್ ವಿಮಾನ ಅದೇ ಸಂದರ್ಭದಲ್ಲಿ ಟೇಕ್ ಆಫ್ ಆಗಲು ಮುಂದಾಗಿತ್ತು. ಆ ಮೂಲಕ ಎರಡೂ ವಿಮಾನಗಳು ರನ್ ವೇನಲ್ಲಿ ಪರಸ್ಪರ ಮುಖಾಮಿಖಿಯಾಗಿದ್ದವು.
ಇನ್ನೇನು ವಿಮಾನಗಳ ಪರಸ್ಪರ ಢಿಕ್ಕಿಯಾಗುತ್ತಿವೆ ಎದು ತಿಳಿದ ಸ್ಪೈಸ್ ಜೆಟ್ ವಿಮಾನದ ಸಿಬ್ಬಂದಿ ಹಾಗೂ ಪೈಲಟ್ ಗಳು ಸಮಯ ಪ್ರಜ್ಞೆ ಮೆರೆದು ಕೂಡಲೇ ತಮ್ಮ ವಿಮಾನವನ್ನು ನಿಲ್ಲಿಸಿದ್ದಾರೆ. ಆ ಮೂಲಕ ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಐಟಿಸಿ ಟವರ್ ಗೆ ಸಂದೇಶ ರವಾನಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಡಿಜಿಸಿಎ ವರದಿ ಕೇಳಿದ್ದು, ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿದೆ.
ಬೆಳಗ್ಗೆಯಷ್ಟೇ ಗೋವಾ ವಿಮಾನ ನಿಲ್ದಾಣದಲ್ಲಿ ಜೆಟ್ ಏರ್ ವೇಸ್ ಗೆ ಸೇರಿದ್ದ ವಿಮಾನವೊಂದು ರನ್ ವೇ ನಲ್ಲಿ ಜಾರಿತ್ತು. ಘಟನೆಯಲ್ಲಿ 19ಕ್ಕೂ ಹೆಚ್ಚು ಮಂದಿ ಗಾಯಗೊಂಡು ವಿಮಾನಕ್ಕೆ ಹಾನಿಯಾಗಿತ್ತು. ಈ ಪ್ರಕರಣದ ಬೆನ್ನಲ್ಲೇ ದೆಹಲಿಯಲ್ಲಿ ಇಂಡಿಗೋ, ಸ್ಪೈಸ್ ಜೆಟ್ ವಿಮಾನಗಳು ಪರಸ್ಪರ ಮುಖಾಮುಖಿಯಾಗಿರುವುದು ವಿಮಾನಯಾನದ ಸುರಕ್ಷತೆ ಕುರಿತಂತೆ ಶಂಕೆ ಮೂಡುವಂತೆ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


