ದೇಶ

ಪ್ಲೇ ಸ್ಕೂಲ್ ಗೆ ಹೋಗಿ ರಾಹುಲ್ ಗಾಂಧಿ ಪೇಟಿಎಂ ಅರ್ಥ ತಿಳಿದುಕೊಳ್ಳಲಿ: ಬಿಜೆಪಿ ಸಲಹೆ

ಪೇಟಿಎಂ ಅಂದರೇ ಪೇ ಟು ಮೋದಿ ಎಂದು ಲೇವಡಿ ಮಾಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ. ..

ಪ್ಲೇ ಸ್ಕೂಲ್ ಗೆ  ಹೋಗಿ ರಾಹುಲ್ ಗಾಂಧಿ  ಪೇಟಿಎಂ ಅರ್ಥ ತಿಳಿದುಕೊಳ್ಳಲಿ: ಬಿಜೆಪಿ ಸಲಹೆ
ರಾಹುಲ್ ಗಾಂಧಿ
Published On :

ಕೊಲ್ಕೊತಾ: ಪೇಟಿಎಂ ಅಂದರೇ ಪೇ ಟು ಮೋದಿ ಎಂದು ಲೇವಡಿ ಮಾಡಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು ನೀಡಿದೆ.

ಪೇಟಿಎಂ ರಾಹುಲ್ ಗಾಂಧಿಗೆ ಅರ್ಥ ಗೊತ್ತಿಲ್ಲ, ಹೀಗಾಗಿ ಅವರು ಪ್ಲೇ ಸ್ಕೂಲ್ ಗೆ ಹೋಗಿ ಪೇಟಿಎಂ ನ ಅರ್ಥ ತಿಳಿದು ಕೊಳ್ಳಲಿ ಎಂದು ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ಸಲಹೆ ನೀಡಿದ್ದಾರೆ.

10 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ದೇಶದಲ್ಲಿ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ರಾಹುಲ್ ಗಾಂಧಿ ಮೊದಲು ತಿಳಿದು ಕೊಳ್ಳಲಿ, ಅದನ್ನು ತಿಳಿದು ಕೊಂಡರೇ ರಾಹುಲ್ ಗಾಂಧಿ ತಮ್ಮ ಬಾಯಿ ಮುಚ್ಚುತ್ತಾರೆ ಎಂದು ಹೇಳಿದ್ದಾರೆ.

ರೈತರ ಬಗ್ಗೆ ಕಾಳಜಿಯಿಲ್ಲದ, ರೈತರಿಗಾಗಿ ಯಾವುದೇ ಒಳ್ಳೆಯ ಕೆಲಸ ಮಾಡದ ನಾಯಕರು ಈಗ ರೈತರ ಬಗ್ಗೆ ಮಾತನಾಡುತ್ತಾರೆ. ರಾಹುಲ್ ಹೇಳಿಕೆಗಳು, ಕೇವಲ ಹೇಳಿಕೆಗಳಾಗಿಯೇ ಇರುತ್ತವೆ, ಇದು ಜನರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ರಾಜಕೀಯವನ್ನು ಸ್ವಚ್ಚಗೊಳಿಸುತ್ತಿದೆ, ಮೋದಿ ಅವರು ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಾರೆ, ರಾಹುಲ್ ಇಂಥ ಅನಾವಶ್ಯಕ ಹೇಳಿಕೆ ನೀಡುತ್ತಿದ್ದರೇ ಎಲ್ಲರೂ ಕಾಂಗ್ರೆಸ್ ಬಿಟ್ಟು ಹೋಗುತ್ತಾರೆ ಎಂದು ಅವರು ಟೀಕಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.