ಕಾನೂನುಬದ್ಧ ತೆರಿಗೆ ಪಾವತಿ ನಾಗರಿಕರ ಕರ್ತವ್ಯ: ಅರುಣ್ ಜೇಟ್ಲಿ
ತೆರಿಗೆ ಪ್ರಮಾಣವನ್ನು ಕಡಿಮೆ ಮಟ್ಟ ಮಾಡುವ ಅಗತ್ಯವಿದೆ ಎಂದು ಹೇಳಿರುವ ಹಣಕಾಸು ಸಚಿವ...

Published On :
ಫರಿದಾಬಾದ್: ತೆರಿಗೆ ಪ್ರಮಾಣವನ್ನು ಕಡಿಮೆ ಮಟ್ಟ ಮಾಡುವ ಅಗತ್ಯವಿದೆ ಎಂದು ಹೇಳಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಕಡಿಮೆ ಮಟ್ಟದ ತೆರಿಗೆ ಜಾಗತಿಕವಾಗಿ ಹೆಚ್ಚು ಸ್ಪರ್ಧಾತ್ಮಕತೆಯನ್ನು ಉಂಟುಮಾಡುತ್ತದೆ ಎಂದರು.
ಅವರು ಅಬಕಾರಿ ಮತ್ತು ಮಾದಕವಸ್ತುಗಳ ನ್ಯಾಷನಲ್ ಅಕಾಡೆಮಿಯಲ್ಲಿ 68ನೇ ವಿಭಾಗದ ಆಂತರಿಕ ಆದಾಯ ಸೇವೆ ಅಧಿಕಾರಿಗಳ ವೃತ್ತಿಪರ ತರಬೇತಿಯನ್ನು ಉದ್ಘಾಟಿಸಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.
ಹೆಚ್ಚು ಸ್ಪರ್ಧಾತ್ಮಕ ಮಾದರಿಯಲ್ಲಿ ಹೆಚ್ಚು ಸೇವೆಗಳನ್ನು ಒದಗಿಸಲು ಕಡಿಮೆ ಮಟ್ಟದ ತೆರಿಗೆಗಳ ಅಗತ್ಯವಿರುತ್ತದೆ. ಸ್ಪರ್ಧೆ ದೇಶೀಯ ಮಟ್ಟದಲ್ಲಲ್ಲ, ಬದಲಿಗೆ ಜಾಗತಿಕ ಮಟ್ಟದಲ್ಲಿ. ನೀವು ಸೇವೆಯಲ್ಲಿರುವಾಗ ಕಾಣುವ ಪ್ರಮುಖ ಬದಲಾವಣೆಯಿದು ಎಂದು ಅಲ್ಲಿ ಸೇರಿದ್ದ ಅಧಿಕಾರಿಗಳನ್ನುದ್ದೇಶಿಸಿ ನುಡಿದರು.
ಕಾನೂನುಬದ್ಧ ತೆರಿಗೆ ಪಾವತಿ ನಾಗರಿಕರ ಕರ್ತವ್ಯವಾಗಿದ್ದು, ತೆರಿಗೆ ಪಾವತಿ ಮಾಡದವರು ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ. ಸರ್ಕಾರಕ್ಕೆ ತೆರಿಗೆ ಕಟ್ಟದಿದ್ದರೆ ಏನೂ ಆಗುವುದಿಲ್ಲ, ಅದು ಅನೈತಿಕತೆ ಅಲ್ಲ ಎಂಬ ಮನೋಭಾವದಿಂದಲೇ ಕಳೆದ 7 ದಶಕಗಳಿಂದ ನಾವು ಜೀವನ ಮಾಡಿಕೊಂಡು ಬಂದಿದ್ದೇವೆ. ಆದರೆ ಇನ್ನು ಮುಂದೆ ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಂಡರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.
ಮುಂದಿನ ದಶಕಗಳಲ್ಲಿ ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಾಗಲಿದೆ ಎಂದು ಅರ್ಥ ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


