1 ಕೋಟಿ ಹಣಕ್ಕಾಗಿ 3 ವರ್ಷದ ಬಾಲಕಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸಿದ ಅಪ್ರಾಪ್ತರು
ಮೂರು ವರ್ಷದ ಬಾಲಕಿಯನ್ನ ಅಪಹರಿಸಿದ ಅಪ್ರಾಪ್ತರು ಆಕೆಯನ್ನ ಕೊಂದು ತುಂಡು ತುಂಡು ಮಾಡಿರುವ ಘಟನೆ...

ಮುಂಬಯಿ: ಮೂರು ವರ್ಷದ ಬಾಲಕಿಯನ್ನ ಅಪಹರಿಸಿದ ಅಪ್ರಾಪ್ತರು ಆಕೆಯನ್ನ ಕೊಂದು ತುಂಡು ತುಂಡು ಮಾಡಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.
ಬಾಲಕಿಯನ್ನು ಅಪಹರಿಸಿದ್ದ ಇಬ್ಬರು ಅಪ್ರಾಪ್ತ ಬಾಲಕರು ಆಕೆಯ ಪೋಷಕರಿಂದ 1 ಕೋಟಿ ರು ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು. ನಿನ್ನೆ ರಾತ್ರಿ ಕಾಜಿಪುರದ ನಾಗಪಾಡ ಪ್ರದೇಶದಲ್ಲಿ ಬಾಲಕಿಯ ದೇಹ ಸಿಕ್ಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 5 ರಂದು ಬಾಲಕಿ ನಾಪತ್ತೆಯಾಗಿದ್ದು, ಈ ಸಂಬಂಧ ಆಕೆ ಪೋಷಕರು ಜೆ.ಜೆ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಬಾಲಕಿಯ ಪೋಷಕರಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ 1 ಕೋಟಿ ರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಬಾಲಕಿ ತಂದೆ 28 ಲಕ್ಷ ರು ಹಣ ನೀಡಲು ಒಪ್ಪಿಕೊಂಡಿದ್ದರು ಎಂದು ಡಿಸಿಪಿ ಮನೋದ್ ಕುಮಾರ್ ತಿಳಿಸಿದ್ದಾರೆ.
ನಂತರ ಥಾಣೆ ಬಳಿಯ ಕಾಲ್ವಾ ಟೌನ್ ಬಳಿ ಹಣ ತರುವಂತೆ ಅಪರಹರಣ ಕಾರರು ಬಾಲಕಿ ತಂದೆಗೆ ತಿಳಿಸಿದ್ದರು. ಬಾಲಕಿಯ ನೆರೆಮನೆಯಲ್ಲಿದ್ದ 16 ವರ್ಷದ ಬಾಲಕ ಆಕೆಯನ್ನು ಅಪಹರಿಸಿ ತನ್ನ ಸ್ನೇಹಿತರೊಂದಿಗೆ ಸೇರಿ ಡಿಸೆಂಬರ್ 5 ರಂದು ಮೊಬೈಲ್ ಚಾರ್ಜರ್ ವೈರ್ ನಿಂದ ಆಕೆಯನ್ನು ಕೊಂದು ತುಂಡರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


