ಭಾರತವನ್ನು ಅಭಿವೃದ್ಧಿ ರಾಷ್ಟ್ರ ಮಾಡುವುದು ನನ್ನ ಉದ್ದೇಶ: ಮೋದಿ
ದೇಶವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ...

ರಾಯ್ಘಡ: ದೇಶವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಹೇಳಿದ್ದಾರೆ.
ರಾಯಘಡಕ್ಕೆ ಭೇಟಿ ನೀಡಿರುವ ಪ್ರಧಾನಿ ಮೋದಿಯವರು ನೂತನ ನ್ಯಾಷನಲ್ ಇನ್ಟಿಟ್ಯೂಟ್ ಆಫ್ ಸೆಕ್ಯೂರಿಟಿ ಮಾರುಕಟ್ಟೆಗೆ ಚಾಲನೆ ನೀಡಿದ್ದಾರೆ. ನಂತರ ಜನತೆಯನ್ನುದ್ದೇಶಿಸಿ ಮಾತನಾಡಿರುವ ಅವರು, ದೇಶವನ್ನು ಅಭಿವೃದ್ಧಿ ರಾಷ್ಟ್ರವಾಗಿಸುವುದು ನಮ್ಮ ಉದ್ದೇಶವಾಗಿದ್ದು, ಕೇವಲ ಮೂರು ವರ್ಷದಲ್ಲಿ ಎನ್ ಡಿಎ ಸರ್ಕಾರ ದೇಶದ ಆರ್ಥಿಕತೆಯನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ.
ಆರ್ಥಿಕತೆ ಕುರಿತಂತೆ ನಮ್ಮ ಸರ್ಕಾರ ಕೆಲ ನಿರ್ಧಾರಗಳನ್ನು ತೆಗೆದುಕೊಂಡಿದೆ. ಇದಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ಆದರೆ, ಇದಾವುದಕ್ಕೂ ನಮ್ಮ ಸರ್ಕಾರ ಹಿಂಜರಿಯುವುದಿಲ್ಲ. ದೇಶದ ಹಿತಾಸಕ್ತಿಯಂತೆ ಸರ್ಕಾರ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ದುಬಾರಿ ನೋಟಿನ ಮೇಲಿನ ನಿಷೇಧ ಇದಕ್ಕೆ ಉದಾಹರಣೆಯಾಗಿದೆ. ನೋಟು ನಿಷೇಧದಿಂದ ಉಂಟಾಗಿರುವ ಸಮಸ್ಯೆ ತಾತ್ಕಾಲಿಕವಾಗಿದ್ದು, ದೀರ್ಘಕಾಲಿಕ ಲಾಭವನ್ನು ನೀಡಲಿದೆ. ಭಾರತ ಉಜ್ವಲ ಹಾದಿಯಲ್ಲಿದ್ದು, ಹಿಂದಿನ ವರ್ಷಗಳನ್ನು ಹೋಲಿಕೆ ಮಾಡಿ ನೋಡಬಹುದಾಗಿದೆ.
ಆರ್ಥಿಕ ಮಾರುಕಟ್ಟೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಬೇಕೆಂದರೆ, ಕೆಲಸ ಮಾಡುವವರಿಗೆ ಸರಿಯಾದ ರೀತಿಯಲ್ಲಿ ಮಾಹಿತಿ ತಿಳಿದಿರಬೇಕಾಗುತ್ತದೆ. ದೇಶದ ಆರ್ಥಿಕತೆಯಲ್ಲಿ ತಮ್ಮ ಪಾತ್ರವೆಷ್ಟು ಎಂಬುದನ್ನು ನಮ್ಮ ಮಾರುಕಟ್ಟೆಗಳು ತೋರಿಸಬೇಕಾಗಿದೆ.
ನಮ್ಮ ಸರ್ಕಾರ ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಷೇರು ಮಾರುಕಟ್ಟೆಗೆ ಸ್ಟಾರ್ಟ್ ಅಪ್ ಗಳ ಜೀವಾಳವಾಗಿದೆ. ಷೇರು ಮಾರುಕಟ್ಟೆಗಳು ರೈತರಿಗೆ ಸಹಾಯವಾಗುವಂತಿರಬೇಕು. ಇವು ನಮ್ಮ ಆರ್ಥಿಕತೆಯ ಅಮೂಲ್ಯ ಅಭರಣಗಳಾಗಿವೆ.
ಗ್ರಾಮಗಳಲ್ಲಿ ಆಘುವ ಬದಲಾವಣಗಳೇ ನಮ್ಮ ಆರ್ಥಿಕತೆಯ ಗೆಲುವಿನ ಮಾನದಂಡವಾಗಿರಬೇಕು. ಅದು ಬಿಟ್ಟು ದಲಾಲ್ ಸ್ಟ್ರೀಟ್ ಅಥವಾ ಲುಟಿಯನ್ಸ್ ಪರಿಣಾಮವಲ್ಲ. ವಿತ್ತೀಯ ಮಾರುಕಟ್ಟೆಯಿಂದ ಲಾಭವನ್ನು ಪಡೆದವರು ತೆರಿಗೆ ಪಾವತಿ ಮಾಡುವ ಮೂಲಕ ದೇಶದ ಅಭಿವೃದ್ಧಿಗಾಗಿ ಕೊಡುಗೆಯನ್ನು ನೀಡಬೇಕು.
ಮಾರುಕಟ್ಟೆಯಿಂದ ಹಣವನ್ನು ಪಡೆಯುತ್ತಿರುವವರು ಇಂದು ಸಾಕಷ್ಟು ಕಾರಣಗಳಿಗೆ ತೆರಿಗೆ ಕಟ್ಟಬೇಕಾಗಿದೆ. ಈ ಹಿಂದೆ ಕೆಲವರು ನ್ಯಾಯಯುತವಲ್ಲದ ಒಪ್ಪಂದಗಳನ್ನು ಮಾಡಿಕೊಂಡು ಮೋಸ ಮಾಡುತ್ತಿದ್ದರು. ಈ ಎಲ್ಲಾ ಬೆಳವಣಿಗೆಗಳಿಗೆ ಸರ್ಕಾರ ಕಡಿವಾಣ ಹಾಕಿದೆ ಎಂದು ಹೇಳಿದ್ದಾರೆ. ಅಲ್ಲದೆ, ಇದೇ ವೇಳೆ ದೇಶದ ಜನತೆಗೆ ಕ್ರಿಸ್'ಮಸ್ ಹಾಗೂ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


