ದೇಶ

ನೋಟು ನಿಷೇಧ ದೇಶದ ನಗದು ಆರ್ಥಿಕತೆ ಮೇಲಿನ ಫೈರ್ ಬಾಂಬ್: ರಾಹುಲ್ ಗಾಂಧಿ

ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ...

ನೋಟು ನಿಷೇಧ ದೇಶದ ನಗದು ಆರ್ಥಿಕತೆ ಮೇಲಿನ ಫೈರ್ ಬಾಂಬ್: ರಾಹುಲ್ ಗಾಂಧಿ
ರಾಹುಲ್ ಗಾಂಧಿ
Published On :
ಚಂಡೀಗಢ: ನೋಟ್ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಪಿಟಿಎಂ ಎಂದರೆ, ಪೇ ಟು ಮೋದಿ ಎಂದು ವ್ಯಂಗ್ಯವಾಡಿದರು.
ಇಂದು ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನೋಟು ನಿಷೇಧ ಭಾರತದ ನಗದು ಆರ್ಥಿಕತೆ ಮೇಲಿನ ಫೈರ್ ಬಾಂಬ್ ದಾಳಿಯಾಗಿದ್ದು, ಇದು ಕೇವರ 50 ಕಾರ್ಪೋರೇಟ್ ಕುಟುಂಬಗಳಿಗಾಗಿ ನಡೆದ ದಾಳಿಯಾಗಿದೆ ಎಂದರು.
ನೋಟ್ ನಿಶೇಧ ನಿರ್ಧಾರ ಬಡವರ, ಮಧ್ಯಮ ವರ್ಗದವರ ಮತ್ತು ರೈತರ ವಿರೋಧಿಯಾಗಿದೆ. ದೆಹಲಿಯಲ್ಲಿ ಬಡವರು ಸಾಲಿನಲ್ಲಿ ನಿಂತಿದ್ದಾರೆ. ಬಿಜೆಪಿ ಅವರಿಗೆ ಮೂರು ರುಪಾಯಿಯ ಲಾಡು ತಿನ್ನಿಸಿದೆ. ಆದರೆ ಉದ್ಯಮಿ ವಿಜಯ್ ಮಲ್ಯ ಅವರಿಗೆ 1,200 ಕೋಟಿ ರುಪಾಯಿಗಳ ಲಾಡು ತಿನ್ನಿಸಿದೆ ಎಂದು ಟೀಕಿಸಿದರು. 
ಮೋದಿಯವರು ನನ್ನನ್ನು ತಮಾಷೆ ಮಾಡುತ್ತಿದ್ದಾರೆ. ನನ್ನನ್ನು ಎಷ್ಟು ಬೇಕಾದರೂ ತಮಾಷೆ ಮಾಡಲಿ, ಆದರೆ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ರಾಹುಲ್ ಪ್ರಧಾನಿಯನ್ನು ಆಗ್ರಹಿಸಿದರು.
ದೇಶದಲ್ಲಿ ಕಪ್ಪು ಹಣ ಕೇವಲ ನಗದು ರೂಪದಲ್ಲಿ ಮಾತ್ರ ಇಲ್ಲ. ರಿಯಲ್ ಎಸ್ಟೇಟ್, ಚಿನ್ನಾಭರಣ ಇತ್ಯಾದಿಗಳಲ್ಲೂ ಇದೆ. ಭಾರತದಲ್ಲಿ ಶೇಕಡಾ 6ರಷ್ಟು ಮಾತ್ರ ಕಾಳಧನ ನಗದುರೂಪದಲ್ಲಿದೆ. ಶೇ. 90ರಷ್ಟು ಕಪ್ಪು ಹಣ ಸ್ವಿಸ್ ಬ್ಯಾಂಕ್ ಗಳಲ್ಲಿದೆ. ಈ ಕೇಂದ್ರ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸ್ವಿಸ್ ಬ್ಯಾಂಕ್ ಕೊಟ್ಟ ಠೇವಣಿದಾರರ ಪಟ್ಟಿಯನ್ನು ಸಂಸತ್ತಿನಲ್ಲಿ ಏಕೆ ಮಂಡಿಸಿಲ್ಲ ಎಂದು ರಾಹುಲ್ ಪ್ರಧಾನಿಯನ್ನು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.