ದೇಶ

ಮದುವೆ ಪಾರ್ಟಿಯಲ್ಲಿ ಮದ್ಯ ಸರಬರಾಜು; 200ಕ್ಕೂ ಹೆಚ್ಚು ವಿವಿಐಪಿಗಳು ಪೊಲೀಸ್ ವಶಕ್ಕೆ!

ಮದ್ಯ ನಿಷೇಧದ ಹೊರತಾಗಿಯೂ ಮದುವೆ ಕಾರ್ಯಾಕ್ರಮದಲ್ಲಿ ಡ್ರಿಂಕ್ಸ್ ಪಾರ್ಟಿಯಲ್ಲಿ ತೊಡಗಿದ್ದ ಸುಮಾರು 200ಕ್ಕೂ ಹೆಚ್ಚು ಗಣ್ಯರನ್ನು ಗುಜರಾತ್ ಪೊಲೀಸರು ಗುರುವಾರ ತಡರಾತ್ರಿಯಲ್ಲಿ ಬಂಧಿಸಿದ್ದಾರೆ.

ಮದುವೆ ಪಾರ್ಟಿಯಲ್ಲಿ ಮದ್ಯ ಸರಬರಾಜು; 200ಕ್ಕೂ ಹೆಚ್ಚು ವಿವಿಐಪಿಗಳು ಪೊಲೀಸ್ ವಶಕ್ಕೆ!
ಟ್ವಿಟರ್ ಚಿತ್ರ
Published On :

ವಡೋದರಾ: ಮದ್ಯ ನಿಷೇಧದ ಹೊರತಾಗಿಯೂ ಮದುವೆ ಕಾರ್ಯಾಕ್ರಮದಲ್ಲಿ ಡ್ರಿಂಕ್ಸ್ ಪಾರ್ಟಿಯಲ್ಲಿ ತೊಡಗಿದ್ದ ಸುಮಾರು 200ಕ್ಕೂ ಹೆಚ್ಚು ಗಣ್ಯರನ್ನು ಗುಜರಾತ್ ಪೊಲೀಸರು ಗುರುವಾರ ತಡರಾತ್ರಿಯಲ್ಲಿ ಬಂಧಿಸಿದ್ದಾರೆ.

ಗುಜರಾತ್ ನ ವಡೋದಾರದಲ್ಲಿ ಕಳೆದ ರಾತ್ರಿ ಈ ಘಟನೆ ನಡೆದಿದ್ದು, ವಡೋದರಾ ಹೊರವಲಯದಲ್ಲಿರುವ ಫಾರ್ಮ್ ಹೌಸ್ ನಲ್ಲಿ ಮದ್ಯದ ಪಾರ್ಟಿಯಲ್ಲಿ ತೊಡಗಿದ್ದ ಸುಮಾರು 200 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರೆಲ್ಲರೂ ಹೈ ಪ್ರೊಫೈಲ್ ವ್ಯಕ್ತಿಗಳಾಗಿದ್ದು, ಬಂಧಿತರಿಂದ ದುಬಾರಿ ಬೆಲೆಯ ರೆಂಜ್ ರೋವರ್, ಬಿಎಂಡಬ್ಲ್ಯೂ, ರೆನಾಲ್ಟ್ ಸಂಸ್ಥೆಗಳ ದುಬಾರಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಷ್ಟ್ರಪಿತ ಮಹಾತ್ಮ ಗಾಂಧಿ ಹುಟ್ಟಿದ ಗುಜರಾತ್ ನಲ್ಲಿ 1960ರಿಂದಲೂ ಮದ್ಯಪಾನ ನಿಷೇಧ ಮಾಡಲಾಗಿದ್ದು, ಅದರ ಹೊರತಾಗಿಯೂ ಮದ್ಯಪಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿವಿಐಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿರಲ್ಲಿ ಬಹುತೇಕ ಮಂದಿ ಗಣ್ಯರಾಗಿದ್ದು, ಈ ಪೈಕಿ ಮಾಜಿ ಐಪಿಎಲ್ ಕಮಿಷನರ್ ಚಿರಾಯು ಅಮೀನ್ ಕೂಡ ಇದ್ದರು ಎಂದು ತಿಳಿದುಬಂದಿದೆ. ವಡೋದರಾದ ಖ್ಯಾತ ಉದ್ಯಮಿಯೊಬ್ಬರ ಕುಟುಂಬದ ಮದುವೆ ಕಾರ್ಯಕ್ರಮದಲ್ಲಿ ಮದ್ಯಪಾನ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ಬಂಧಿತರೆಲ್ಲರನ್ನೂ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.