ದೇಶ

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"

ನೋಟು ನಿಷೇಧದ ಬಳಿಕ ಹಳೆಯ ನೋಟುಗಳ ಜಮಾವಣೆಗಾಗಿ ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆಯೇ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಗ್ರಾಹಕರು ಮುಗಿ ಬೀಳುತ್ತಿದ್ದು, ತಡವಾಗಿದ್ದಕೆ ಅವರು ನೀಡುತ್ತಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿವೆ.

"ಪ್ರಧಾನಿ ಮೋದಿ ಮೇಲೆ ಭರವಸೆ ಇಟ್ಟಿದ್ದೆ, ಹೀಗಾಗಿ ತಡವಾಗಿ ಹಣ ಜಮೆ ಮಾಡುತ್ತಿದ್ದೇನೆ"
ಹಳೆಯ ನೋಟು ಜಮೆ ಮಾಡುವ ಆರ್ ಬಿಐ ಅರ್ಜಿ
Published On :

ರಾಯ್ ಪುರ: ನೋಟು ನಿಷೇಧದ ಬಳಿಕ ಹಳೆಯ ನೋಟುಗಳ ಜಮಾವಣೆಗಾಗಿ ಅಂತಿಮ ಗಡುವು ಹತ್ತಿರವಾಗುತ್ತಿದ್ದಂತೆಯೇ ತಮ್ಮ ಬಳಿ ಇರುವ ಹಳೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಜಮೆ ಮಾಡಲು ಗ್ರಾಹಕರು ಮುಗಿ  ಬೀಳುತ್ತಿದ್ದು, ತಡವಾಗಿದ್ದಕೆ ಅವರು ನೀಡುತ್ತಿರುವ ಕಾರಣಗಳು ಅಚ್ಚರಿಗೆ ಕಾರಣವಾಗಿವೆ.

ಹಳೆಯ ನೋಟು ಜಮಾವಣೆಗೆ ಆರ್ ಬಿಐ ಅರ್ಜಿ ಭರ್ತಿ ಮಾಡಬೇಕಿದ್ದು, ಈ ಅರ್ಜಿಯಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಅದರಂತೆ ಹಣ ಜಮಾವಣೆ ತಡವಾಗಿದ್ದೇಕೆ ಎಂಬ ಪ್ರಶ್ನೆ ಇದ್ದು, ಇದಕ್ಕೆ ಗ್ರಾಹಕರು ನೀಡುತ್ತಿರುವ  ಉತ್ತರಗಳು ಸ್ವತಃ ಆರ್ ಬಿಐ ಅಚ್ಚರಿಗೆ ಕಾರಣವಾಗಿದೆ. ರಾಯ್ ಪುರದಲ್ಲಿ ಓರ್ವ ವ್ಯಕ್ತಿ ತನ್ನ ಬಳಿ ಇದ್ದ ಹಣ ಜಮೆ ಮಾಡುವಾಗ ಅರ್ಜಿಯಲ್ಲಿನ ಈ ಪ್ರಶ್ನೆಗೆ "ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 30ರೊಳಗೆ ಹಳೆಯ  ನೋಟುಗಳನ್ನು ಜಮೆ ಮಾಡಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಾನು ಇಂದು ಅಂದರೆ ಡಿಸೆಂಬರ್ 20ರಂದು ಜಮೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಮತ್ತೊಂದು ಅರ್ಜಿಯಲ್ಲಿ "ನಾನು ಹೃದ್ರೋಗ ರೋಗಿಯಾಗಿದ್ದು, ಸರತಿ ಸಾಲಲ್ಲಿ ಗಂಟೆ ಗಟ್ಟಲೆ ನಿಲ್ಲಬೇಡ ಎಂದು ವೈದ್ಯರು ಸೂಚಿಸಿದ್ದರು. ಹೀಗಾಗಿ ನಾನು ಜನಸಂದಣಿ ಕಡಿಮೆಯಾದಾಗ ಜಮೆ ಮಾಡಲು ನಿರ್ಧರಿಸಿದ್ದೆ ಎಂದು  ಹೇಳಿದ್ದಾರೆ. ಇದಕ್ಕೆ ನಯವಾಗಿ ಉತ್ತರಿಸಿರುವ ಬ್ಯಾಂಕ್ ಸಿಬ್ಬಂದಿ ವೈದ್ಯರ ಪ್ರಮಾಣ ಪತ್ರ ತರುವಂತೆ ಸೂಚಿಸಿ ವಾಪಸ್ ಕಳುಹಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಕಳೆದ ತಿಂಗಳೇ ನನ್ನ ಪತ್ನಿ ನನಗೆ ಹಳೆಯ ನೋಟುಗಳನ್ನು  ನೀಡಿದ್ದಳು. ಆದರೆ ನಾನು ಮರೆತು ಹೋಗಿದ್ದೆ ಎಂದು ಬರೆದಿದ್ದಾರೆ. ಮತ್ತೊಂದು ಅರ್ಜಿಯಲ್ಲಿ ನಾನು ಬೇರೆ ಪ್ರದೇಶದಲ್ಲಿದ್ದೆ ಹೀಗಾಗಿ ಹಣ ಜಮಾವಣೆ ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾರೆ.

ಒಟ್ಟಾರೆ ಹಳೆಯ ನೋಟುಗಳನ್ನು ಜಮೆ ಮಾಡಲು ಆರ್ ಬಿಐ ಕೇಳಿದ್ದ ಪ್ರಶ್ನೆಗೆ ಚಿತ್ರ ವಿಚಿತ್ರ ಉತ್ತರಗಳು ಬರುತ್ತಿವೆ. ಈ ಹಿಂದೆ ಇಂತಹುದೇ ಪ್ರಶ್ನೆಯೊಂದಕ್ಕೆ ಬ್ಯಾಂಕ್ ಗ್ರಾಹಕನೊಬ್ಬ ಪ್ರಧಾನಿ ಮೋದಿ ಅವರ ಕಾರಣ ನೀಡಿದ್ದ. ಅದು  ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.