ತ್ರಿಪುರಾ ಸ್ಪೀಕರ್ ಅಧಿಕಾರ ದಂಡ ಕಸಿದು ಓಡಿದ ಹೋದ ಟಿಎಂಸಿ ಶಾಸಕ!
ತ್ರಿಪುರಾದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ಟಿಎಂಸಿ ಶಾಸಕರೊಬ್ಬರು ಸ್ಪೀಕರ್ ಅವರ ಸಾಂಕೇತಿಕ ಬೆಳ್ಳಿಯ ದಂಡವನ್ನು ಕಸಿದುಕೊಂಡು ಸದನದ ತುಂಬಾ ಓಡುತ್ತಾ, ಕಲಾಪವನ್ನು ತಡೆದ ವಿಲಕ್ಷಣಕಾರಿ ಘಟನೆಯೊಂದು ಮಂಗಳವಾರ...

ಅಗರ್ತಲಾ: ತ್ರಿಪುರಾದಲ್ಲಿ ವಿಧಾನಸಭಾ ಕಲಾಪ ನಡೆಯುತ್ತಿದ್ದ ವೇಳೆ ಟಿಎಂಸಿ ಶಾಸಕರೊಬ್ಬರು ಸ್ಪೀಕರ್ ಅವರ ಸಾಂಕೇತಿಕ ಬೆಳ್ಳಿಯ ದಂಡವನ್ನು ಕಸಿದುಕೊಂಡು ಸದನದ ತುಂಬಾ ಓಡುತ್ತಾ, ಕಲಾಪವನ್ನು ತಡೆದ ವಿಲಕ್ಷಣಕಾರಿ ಘಟನೆಯೊಂದು ಮಂಗಳವಾರ ನಡೆದಿದೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕ ಸುದೀಪ್ ರಾಯ್ ಬರ್ಮನ್ ಅವರು ತ್ರಿಪುರಾದ ಸ್ಪೀಕರ್ ರಾಮೇಂದ್ರ ಚೇಂದ್ರ ದೇಬ್ ನಾಥ್ ಅವರ ಅಧಿಕಾರ ದಂಡವನ್ನು ಕಿತ್ತುಕೊಂಡು ಸದನದಿಂದ ಓಡಿ ಕಲಾಪಕ್ಕೆ ಭಂಗವನ್ನುಂಟು ಮಾಡಿದ್ದಾರೆಂದು ವರದಿಗಳು ತಿಳಿಸಿವೆ.
ಸಿಪಿಐ-ಎಂ ಪಕ್ಷದ ನಾಯಕರು ಶಾಮಿಲಾಗಿದ್ದಾರೆಂಬ ಲೈಂಗಿಕ ಹಗರಣದ ಪ್ರಕರಣ ಕುರಿತು ಸದನದಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ತೃಣಮೂಲ ಪಕ್ಷದ ಶಾಸಕ ಸುದೀಪ್ ರಾಯ್ ಅವರು, ಸ್ಪೀಕರ್ ಅವರ ದಂಡವನ್ನು ಕಿತ್ತುಕೊಂಡು ಸದನದ ಹೊರಗೆ ಓಡಲು ಆರಂಭಿಸಿದ್ದರು. ಈ ವೇಳೆ ಸದನ ಕಲಾಪ ಹಠಾತ್ತನೇ ನಿಂತಿತು.
ಸ್ಪೀಕರ್ ಅವರ ಲಾಂಛನವನ್ನು ಕಸಿದುಕೊಂಡು ಓಡುತ್ತಿದ್ದ ಬರ್ಮನ್ ಅವರನ್ನು ಕೂಡಲೇ ಸದನದ ಭದ್ರತಾ ಸಿಬ್ಬಂದಿಗಳು, ಕಾಂಗ್ರೆಸ್ ಹಾಗೂ ಟಿಎಂಸಿ ಶಾಸಕರು ಬೆನ್ನಟ್ಟಿದರು. ಕೆಲ ಹೊತ್ತಿನ ಬಳಿದ ಭದ್ರತಾ ಸಿಬ್ಬಂದಿಗಳು ದಂಡವನ್ನು ಸ್ಪೀಕರ್ ಅವರಿಗೆ ಹಿಂತಿರುಗಿಸಿದರು.
ಬರ್ಮನ್ ಅವರು ಯಾವುದೇ ಪೂರ್ವ ಸೂಚನೆಯನ್ನು ನೀಡದೆಯೇ ಶೂನ್ಯ ವೇಳೆಯಲ್ಲಿ ಲೈಂಗಿಕ ಹಗರಣದ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದರು. ಈ ವೇಳೆ ವಿರೋಧ ಪಕ್ಷದವರು ಸದನದ ಬಾವಿಗಿಳಿದು ಘೋಷಣೆ ಕೂಗಲು ಆರಂಭಿದ್ದರು.
ಈ ವೇಳೆ ಸ್ಪೀಕರ್ ಅವರು ವಿಚಾರವನ್ನು ಚರ್ಚೆ ನಡೆಸಲು ನಿರಾಕಸಿಸಿದ್ದರು. ಇದಕ್ಕೆ ಕುಪಿತರಾದ ಬರ್ಮನ್ ಅವರು ಸ್ಪೀಕರ್ ಅವರ ಲಾಂಛನವನ್ನು ಕಿತ್ತುಕೊಂಡು ಓಡಲು ಆರಂಭಿಸಿದ್ದರೆಂದು ವರದಿಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


