ದೇಶ

'ಚಾಯ್ ವಾಲಾ ಆಗಿದ್ದ ಮೋದಿ ಈಗ ಪೇಟಿಎಂ ವಾಲಾ': ಮಮತಾ ಲೇವಡಿ

ನರೇಂದ್ರ ಮೋದಿ ಸರ್ಕಾರ ಕಿವುಡ ಹಾಗೂ ಮೂಕ ಸರ್ಕಾರವಾಗಿದೆ. ಚಾಯ್ ವಾಲಾ ಆಗಿದ್ದವರು ಈಗ ಪೇಟಿಎಂ ವಾಲಾ ಆಗಿದ್ದಾರೆ ಎಂದು ಮೋದಿ ವಿರುದ್ಧ ...

'ಚಾಯ್ ವಾಲಾ ಆಗಿದ್ದ ಮೋದಿ ಈಗ ಪೇಟಿಎಂ ವಾಲಾ':  ಮಮತಾ ಲೇವಡಿ
ಮಮತಾ ಬ್ಯಾನರ್ಜಿ
Published On :

ಕೊಲ್ಕೋತಾ; ನರೇಂದ್ರ ಮೋದಿ ಸರ್ಕಾರ ಕಿವುಡ ಹಾಗೂ ಮೂಕ ಸರ್ಕಾರವಾಗಿದೆ. ಚಾಯ್ ವಾಲಾ ಆಗಿದ್ದವರು ಈಗ ಪೇಟಿಎಂ ವಾಲಾ ಆಗಿದ್ದಾರೆ ಎಂದು ಮೋದಿ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.

ಬಾಂಕುರ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಮೊದಲು ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಚಾಯ್ ವಾಲಾ ಎಂದು ಕರೆದು ಕೊಳ್ಳುತ್ತಿದ್ದರು. ಈಗ ಅವರು ಮಿಲಿಯನೇರ್ ಪೇಟಿಮ್ ವಾಲಾ ಆಗಿದ್ದಾರೆ ಎಂದು ಟೀಕಿಸಿದ್ದಾರೆ.

ಜನ ಸಾಮಾನ್ಯರು ತಾವು ಕಷ್ಟ ಪಟ್ಟು ದುಡಿದ ಹಣವನ್ನು ಎಲ್ಲಿ ಕೂಡಿಡಬೇಕು ಎಂದು ಆಗ್ರಹಿಸುವ ಹಕ್ಕು ಮೋದಿಗಿಲ್ಲ, ನೋಟು ನಿಷೇಧ ಕ್ರಮ ದೇಶದಲ್ಲಿ ದೊಡ್ಡ ತಲೆನೋವಾಗಿದೆ ಎಂದ ಮಮತಾ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ದೇಶದಲ್ಲಿರುವ ಸರ್ಕಾರ ಕಿವುಡ ಹಾಗೂ ಮೂಕವಾಗಿದೆ. ಒತ್ತಾಯದ ಆಡಳಿತಕ್ಕೆ ಇಡೀ ದೇಶವನ್ನೇ ಬಲವಂತವಾಗಿ ತಳ್ಳುತ್ತಿದ್ದಾರೆ ಎಂದು ಮಮತಾ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.