ಆಂಧ್ರಪ್ರದೇಶ ಅಬಕಾರಿ ಉಪಾಯುಕ್ತರ ಮನೆ ಮೇಲೆ ಎಸಿಬಿ ದಾಳಿ, ಭಾರಿ ಪ್ರಮಾಣದ ಆಸ್ತಿ ಪತ್ತೆ
ನೋಟು ನಿಷೇಧ ಬಳಿಕ ಕಾಳಧನಿಕರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರದ 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಹೈದರಾಬಾದ್: ನೋಟು ನಿಷೇಧ ಬಳಿಕ ಕಾಳಧನಿಕರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು, ಆಂಧ್ರ ಪ್ರದೇಶ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಆಂಧ್ರದ 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಅಬಕಾರಿ ಉಪಾಯುಕ್ತ ಕೆಎಲ್ ಭಾಸ್ಕರ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೆಎಲ್ ಭಾಸ್ಕರ್ ಅವರ ಸಂಬಂಧಿಕರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದು, ಇಲ್ಲಿ ಅಪಾರ ಪ್ರಮಾಣದ ನಗದು, ಆಸ್ತಿ ಮತ್ತು ಚಿನ್ನಾಭರಣಗಳನ್ನು ಪತ್ತೆ ಮಾಡಿದ್ದಾರೆ.
ಮೂಲಗಳ ಪ್ರಕಾರ ಶನಿವಾರ ಆಂಧ್ರ ಪ್ರದೇಶದಲ್ಲಿ ನಡೆದ ಎಸಿಬಿ ದಾಳಿ ವೇಳೆ ಸಿಕ್ಕ ಸಣ್ಣ ಮಾಹಿತಿಯನ್ನಾಧರಿಸಿ ಅಧಿಕಾರಿಗಳು ಭಾನುವಾರ ದಾಳಿ ನಡೆಸಿದ್ದು, ವಿಶಾಖಪಟ್ಟಣ, ವಿಜಯವಾಡ, ಪಶ್ಚಿಮ ಗೋದಾವರಿ ಹಾಗೂ ಹೈದರಾಬಾದ್ ಸೇರಿದಂತೆ ಒಟ್ಟು 11 ಪ್ರದೇಶಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿದ್ದಾರೆ. ಈ ವೇಳೆ ಅಬಕಾರಿ ಉಪಾಯುಕ್ತ ಕೆಎಲ್ ಭಾಸ್ಕರ್ ಅವರಿಗೆ ಸೇರಿದೆ 2 ದುಬಾರಿ ಫ್ಲಾಟ್ ಗಳು, 10 ಮನೆಗಳ ಆಸ್ತಿ ಪತ್ರಗಳು, 4.5 ಎಕರೆ ಕೃಷಿ ಭೂಮಿ ಪತ್ರಗಳು ಸೇರಿದಂತೆ 9 ಲಕ್ಷ ನಗದು, ಹಾಗೂ 3 ಕೆಜಿ ಚಿನ್ನ, 15 ಕೆಜಿ ಬೆಳ್ಳಿ ಮತ್ತು 29 ಬಾಟಲ್ ವಿದೇಶಿ ಮದ್ಯ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಅಂತೆಯೇ ವಿವಿಧ ಸಂಸ್ಥೆಗಳಲ್ಲಿ ಕೆಎಲ್ ಭಾಸ್ಕರ್ ಅವರು ಹೊಂದಿರುವ 23 ಲಕ್ಷ ಮೌಲ್ಯದ ಷೇರು ಪತ್ರಗಳು, 3 ಲಕ್ಷ ಮೌಲ್ಯದ ಎಲ್ ಐಸಿ ಪಾಲಿಸಿ ಪತ್ರಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


