ದೇಶ

ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ 4 ವರ್ಷ: ನ್ಯಾಯಕ್ಕಾಗಿ ಕಾಯುತ್ತಿರುವ ತಾಯಿ

ಇಡೀ ದೇಶದ ನಾಗರಿಕರನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯಾಳ ಸಾಮೂಹಿಕ ಅತ್ಯಾಚಾರ ಪ್ರಕರಣ...

ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ 4 ವರ್ಷ: ನ್ಯಾಯಕ್ಕಾಗಿ ಕಾಯುತ್ತಿರುವ ತಾಯಿ
ನಿರ್ಭಯಾಳ ತಾಯಿ ಆಶಾ ದೇವಿ
Published On :
ನವದೆಹಲಿ: ಇಡೀ ದೇಶದ ನಾಗರಿಕರನ್ನೇ ಬೆಚ್ಚಿ ಬೀಳಿಸಿದ ದೆಹಲಿಯ ನಿರ್ಭಯಾಳ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದು ಇಂದಿಗೆ 4 ವರ್ಷ.ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆಯಷ್ಟೆ. ಇದರಿಂದ ಕಾನೂನಿನ ಬಗ್ಗೆ ಜನರಿಗೆ ಅಂಜಿಕೆಯಿರುವುದಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾದರೆ ತಮಗೆ ಸಮಾಧಾನ ಎನ್ನುತ್ತಾರೆ ನಿರ್ಭಯಾರ ತಾಯಿ.
''ಪ್ರಕರಣ ನಡೆದು ಇಂದಿಗೆ ನಾಲ್ಕು ವರ್ಷ ಕಳೆಯಿತು. ಆದರೆ ಇನ್ನೂ ನಮಗೆ ಮತ್ತು ತೀರಿಹೋದ ನಮ್ಮ ಮಗಳಿಗೆ ನ್ಯಾಯ ಸಿಕ್ಕಿಲ್ಲ. ಅಪರಾಧಿಗಳಿಗೆ ಶಿಕ್ಷೆಯಾಗಿಲ್ಲ. ಕೇಸು ಸುಪ್ರೀಂ ಕೋರ್ಟ್ ನಲ್ಲಿ  ವಿಚಾರಣೆ ನಡೆಯುತ್ತಿದ್ದು ಇನ್ನೂ ತೀರ್ಪು ಪ್ರಕಟವಾಗಿಲ್ಲ. ಯಾವಾಗ ನಮಗೆ ಮತ್ತು ಮಗಳಿಗೆ ನ್ಯಾಯ ಸಿಗಬಹುದು ಎಂದು ಗೊತ್ತಿಲ್ಲ ಎನ್ನುತ್ತಾರೆ ನಿರ್ಭಯಾಳ ತಾಯಿ ಆಶಾ ದೇವಿ. 
ಇಂದಿಗೂ ಕೂಡ ಅಂತಹ ಪ್ರಕರಣ ಸಾಕಷ್ಟು ನಡೆಯುತ್ತವೆ. ಮಕ್ಕಳ ಮೇಲೆ ಕೂಡ ಲೈಂಗಿಕ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಅಂದರೆ ಈ ದೇಶದ ಕಾನೂನು ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದರ್ಥ. ಯಾರಿಗೂ ಕಾನೂನಿನ ಭಯವಿಲ್ಲ ಎಂದು ಅವರು ಹೇಳುತ್ತಾರೆ.
2012, ಡಿಸೆಂಬರ್ 16ರಂದು ರಾತ್ರಿ ದಕ್ಷಿಣ ದೆಹಲಿಯಲ್ಲಿ ಚಲಿಸುತ್ತಿರುವ ಬಸ್ಸಿನಲ್ಲಿ ನಿರ್ಭಯಾಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಸಿನಿಮಾವೊಂದನ್ನು ವೀಕ್ಷಿಸಿ ತನ್ನ ಸ್ನೇಹಿತನೊಂದಿಗೆ ಮನೆಗೆ ಮರಳಿ ಬರುತ್ತಿರುವ ವೇಳೆ ಈ ಘಟನೆ ನಡೆದಿತ್ತು. ಘಟನೆ ನಡೆದು 13 ದಿನಗಳ ಬಳಿಕ ನಿರ್ಭಯಾ ಸಿಂಗಾಪುರದಲ್ಲಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಕೇಸಿಗೆ ಸಂಬಂಧಪಟ್ಟಂತೆ ಬಂಧನಕ್ಕೊಳಪಟ್ಟ 6 ಮಂದಿಯಲ್ಲಿ ರಾಮ್ ಸಿಂಗ್ ಎಂಬುವವನು 2013 ಮಾರ್ಚ್ ತಿಂಗಳಲ್ಲಿ ಜೈಲಿನಲ್ಲಿ ನೇಣು ಹಾಕಿಕೊಂಡನು. ಇನ್ನೊಬ್ಬ ಘಟನೆ ನಡೆದ ಸಮಯದಲ್ಲಿ ಬಾಲಾಪರಾಧಿಯಾಗಿದ್ದರಿಂದ ಗರಿಷ್ಟ 3 ವರ್ಷಗಳವರೆಗೆ ಆತನಿಗೆ ಶಿಕ್ಷೆ ಸಿಗಬಹುದು.
ಇತರ ನಾಲ್ವರು ಅಪರಾಧಿಗಳಾದ ಅಕ್ಷಯ್, ವಿನಯ್ ಶರ್ಮ, ಪವನ್ ಮತ್ತು ಮುಕೇಶ್ ಎಂಬುವವರಿಗೆ ದೆಹಲಿ ಹೈಕೋರ್ಟ್ 2013ರಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. 
ತಮಗೆ ನೀಡಿದ ಶಿಕ್ಷೆಯನ್ನು ಪ್ರಶ್ನಿಸಿ ಈ ನಾಲ್ವರು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದು ಅದಿನ್ನೂ ವಿಚಾರಣೆ ಹಂತದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.