48 ಗ್ರಾಹಕರಿಂದ ಪೇಟಿಎಂಗೆ 6 ಲಕ್ಷ ರು. ಪಂಗನಾಮ: ಕೇಸು ದಾಖಲಿಸಿಕೊಂಡ ಸಿಬಿಐ
48 ಗ್ರಾಹಕರು ಒಟ್ಟು 6 ಲಕ್ಷ ರು ವಂಚನೆ ಮಾಡಿದ್ದಾರೆ ಎಂದು ಮೊಬೈಲ್ ವ್ಯಾಲೆಟ್ ಕಂಪೆನಿ ಪೇಟಿಎಂ ಆರೋಪಿಸಿದೆ....

ನವದೆಹಲಿ: 48 ಗ್ರಾಹಕರು ಒಟ್ಟು 6 ಲಕ್ಷ ರು. ವಂಚನೆ ಮಾಡಿದ್ದಾರೆ ಎಂದು ಮೊಬೈಲ್ ವ್ಯಾಲೆಟ್ ಕಂಪೆನಿ ಪೇಟಿಎಂ ಆರೋಪಿಸಿದೆ.
ಈ ವಂಚನೆಯ ಬಗ್ಗೆ ಪೇಟಿಎಂ ಸಿಬಿಐಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ. ಸರ್ಕಾರಿ ಸ್ವಾಯತ್ತಾ ತನಿಖಾ ಸಂಸ್ಥೆಯಾದ ಸಿಬಿಐ ಈ ರೀತಿಯ ಕೇಸುಗಳನ್ನು ದಾಖಲಿಸಿಕೊಂಡು ತನಿಖೆ ನಡೆಸುವಂತಿಲ್ಲ, ಆದರೆ ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
ಪ್ರಾಥಮಿಕ ಮಾಹಿತಿ ವರದಿ( ಎಫ್ ಐಆರ್ ) ಆಧಾರದ ಮೇಲೆ ಸಿಬಿಐ 15 ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದೆ. ದೆಹಲಿಯ ಸಾಕೇತ್ ಹಾಗೂ ಗೋವಿಂದಪುರಿ ಮತ್ತು ಕಾಲ್ಕಜಿ ನಿವಾಸಿಗಳ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.
ಈ ಸಂಬಂಧ ಪೇಟಿಎಂ ಲೀಗಲ್ ಮ್ಯಾನೇಜರ್ ಎಂ ಶಿವಕುಮಾರ್ ದೂರು ದಾಖಲಿಸಿದ್ದಾರೆ. ಕೆಲ ಗ್ರಾಹಕರಿಗೆ ದೋಷಯುಕ್ತ ಉತ್ಪನ್ನಗಳನ್ನು ನೀಡಲಾಗಿತ್ತು. ಹೀಗಾಗಿ ಅಂಥ ಹಾನಿಯಾದ ಉತ್ಪನ್ನಗಳನ್ನು ವಾಪಸ್ ವ್ಯಾಪಾರಿಗಳಿಗೆ ಕಳುಹಿಸಿಕೊಡಲಾಗಿತ್ತು. ನಂತರ ಒಂದು ತಂಡದ ಮೂಲಕ ಗ್ರಾಹಕರಿಗೆ ವಾಪಸ್ ಅವರ ಹಣ ಕಳುಹಿಸಿಕೊಳ್ಳಲಾಗಿತ್ತು. ಇದರಲ್ಲಿ 48 ಗ್ರಾಹಕರು ಒಳ್ಳೆಯ ಉತ್ಪನ್ನಗಳನ್ನು ಪಡೆದಿದ್ದರು ಮತ್ತೆ ರಿಫಂಡ್ ಹಣವನ್ನು ಕೂಡ ಪಡೆದು ವಂಚಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


