ದೇಶ

ಪ್ರಧಾನಿ ಮೋದಿ ಬಡವರ ವಿರುದ್ಧ ಸಮರ ಸಾರಿದ್ದಾರೆ: ನೋಟು ನಿಷೇಧ ಕುರಿತು ರಾಹುಲ್ ಕಿಡಿ

ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ...

ಪ್ರಧಾನಿ ಮೋದಿ ಬಡವರ ವಿರುದ್ಧ ಸಮರ ಸಾರಿದ್ದಾರೆ: ನೋಟು ನಿಷೇಧ ಕುರಿತು ರಾಹುಲ್ ಕಿಡಿ
ನರೇಂದ್ರ ಮೋದಿ-ರಾಹುಲ್ ಗಾಂಧಿ
Published On :
ದಾದ್ರಿ: ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತೊಮ್ಮೆ ಮೋದಿ ವಿರುದ್ಧ ಗುಡುಗಿದ್ದಾರೆ.
ಉತ್ತರಪ್ರದೇಶದ ದಾದ್ರಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನವೆಂಬರ್ 8ರಂದು ನೋಟು ನಿಷೇಧವನ್ನು ಪ್ರಧಾನಿ ಮೋದಿ ಅವರು ಘೋಷಿಸಿ ಬಡವರ ವಿರುದ್ಧ ಯುದ್ಧ ಮಾಡುತ್ತಿದ್ದಾರೆ. ಮೋದಿ ಅವರ ನಗದು ರಹಿತ ಆರ್ಥಿಕತೆಯಿಂದ ಬಡವರು ಹಣವಿಲ್ಲದಂತಾಗಿದ್ದಾರೆ. ಬಡವರು ಶ್ರಮಪಟ್ಟು ಗಳಿಸಿದ ಹಣವನ್ನು ಮೋದಿ ಅವರು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 
ಕಾಳಧನಿಕರ ಹಣವನ್ನು ಹೊರತೆಗೆಯುವುದಾಗಿ ಹೇಳಿ ಮೋದಿ ಅವರು ಬಡವರ ವಿರುದ್ಧದ ಸಮರ ಸಾರಿದ್ದಾರೆ. ನೋಟು ನಿಷೇಧದಿಂದ ನಿಷ್ಠಾವಂತ ಜನರನ್ನು ಮೋದಿ ಬೀದಿಗೆ ತಂದಿದ್ದಾರೆ. ಆದರೆ ಶ್ರೀಮಂತರು ಹಾಗ ಭ್ರಷ್ಠರು ಬ್ಯಾಂಕುಗಳ ಹಿಂಬಾಗಿಲಿನಿಂದ ಹಣ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.