ನೋಟು ನಿಷೇಧ: ಕೇಂದ್ರಕ್ಕೆ ಬೆಂಬಲ ವ್ಯಕ್ತಪಡಿಸಿದ ಭಾರತೀಯ ವಾಯುಸೇನೆ
ನೋಟು ನಿಷೇಧ ನಿರ್ಧಾರ ಕುರಿತಂತೆ ಭಾರತೀಯ ಸೇನೆ ವಾಯುಸೇನೆ ಕೇಂದ್ರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದು, ಕೇಂದ್ರ ನಿರ್ಧಾರವನ್ನು ಸೇನೆ ಸ್ವಾಗತಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಅವರು ಶನಿವಾರ ಹೇಳಿದ್ದಾರೆ...

ಕೋಲ್ಕತಾ: ನೋಟು ನಿಷೇಧ ನಿರ್ಧಾರ ಕುರಿತಂತೆ ಭಾರತೀಯ ಸೇನೆ ವಾಯುಸೇನೆ ಕೇಂದ್ರಕ್ಕೆ ಬೆಂಬಲವನ್ನು ವ್ಯಕ್ತಪಡಿಸಿದ್ದು, ಕೇಂದ್ರ ನಿರ್ಧಾರವನ್ನು ಸೇನೆ ಸ್ವಾಗತಿಸಿದೆ ಎಂದು ಏರ್ ಚೀಫ್ ಮಾರ್ಷಲ್ ಅರೂಪ್ ರಹಾ ಅವರು ಶನಿವಾರ ಹೇಳಿದ್ದಾರೆ.
ಕಾಶಿಪುರದಲ್ಲಿರುವ ಶಸ್ತ್ರಾಸ್ತ್ರಗಳ ಕಾರ್ಖಾನೆಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ರು 500 ಹಾಗೂ 1,000 ಮುಖಬೆಲೆ ದುಬಾರಿ ನೋಟಿನ ಮೇಲೆ ಕೇಂದ್ರ ಸರ್ಕಾರ ನಿಷೇಧವನ್ನು ಹೇರಿದ್ದು, ಕೇಂದ್ರ ನಿರ್ಧಾರವನ್ನು ಸೇನೆ ಸ್ವಾಗತಿಸಿದೆ ಎಂದು ಹೇಳಿದ್ದಾರೆ.
ಸರ್ಕಾರದ ದಿಢೀರ್ ನಿರ್ಧಾರದಿಂದ ಎದುರಾಗಿರುವ ಅನಾನುಕೂಲತೆಯನ್ನು ಸರಿಪಡಿಸಲು ಸೇನೆ ಕೂಡ ಕೇಂದ್ರದೊಂದಿಗೆ ಕೈಜೋಡಿಸಿದ್ದು, ಕೇಂದ್ರದ ಕಾರ್ಯನಿರ್ವಹಣೆಯಲ್ಲಿ ಸೇನೆ ಕೂಡ ಪಾತ್ರ ನಿರ್ವಹಿಸುತ್ತಿದೆ. ದೇಶದಲ್ಲಿ ನೋಟುಗಳ ಕೊರತೆಯುಂಟಾಗಿರುವ ಹಿನ್ನಲೆಯಲ್ಲಿ ವಾಯುಸೇನೆ ಪಡೆ ಸರ್ಕಾರದ ನೆರವಿಗೆ ಬಂದಿದ್ದು, ದೊಡ್ಡ ಮೊತ್ತದ ನೋಟುಗಳನ್ನು ದೇಶದೆಲ್ಲೆಡೆ ಸಾಗಿಸುವಲ್ಲಿ ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ನಿರ್ಧಾರ ಯಶಸ್ವಿಯಾಗಲಿ ಎಂದು ಆಶಿಸುತ್ತೇವೆ. ಒಂದು ವೇಳೆ ನಿರ್ಧಾರ ಯಶಸ್ವಿಯಾಗಿದ್ದೇ ಆದರೆ, ದೇಶಕ್ಕೆ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಬಂಧನಕ್ಕೊಳಗಾಗಿರುವ ವಾಯುಪಡೆ ಮಾಜಿ ಮುಖ್ಯಸ್ಥ ಎಸ್ ಪಿ ತ್ಯಾಗಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಹಗರಣ ನಿಜಕ್ಕೂ ದುರಾದೃಷ್ಟಕರ ಸಂಗತಿಯಾಗಿದೆ. ಈ ರೀತಿಯ ಪ್ರಕರಣಗಳು ಭಾರತೀಯ ವಾಯುಪಡೆಯ ಗೌರವಕ್ಕೆ ಧಕ್ಕೆಯನ್ನುಂಟು ಮಾಡಲಿದೆ ಎಂದು ತಿಳಿಸಿದ್ದಾರೆ
ಕಾನೂನು ಹಾಗೂ ನ್ಯಾಯಾಧೀಕರಣ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಕ್ರಮಕೈಗೊಳ್ಳಲಿದೆ ಎಂದು ನಂಬಿಕೆಯಿದೆ. ದೇಶವನ್ನು ರಕ್ಷಿಸುವ ಕಾರ್ಯದಲ್ಲಿ ಭಾರತೀಯ ವಾಯುಪಡೆ ಹಾಗೂ ಸೇನಾ ಪಡೆ ಸತತವಾಗಿ ಶ್ರಮ ಪಡುತ್ತಿದ್ದು, ಯಾವುದೇ ತಪ್ಪುಗಳು ಹಾಗೂ ತೊಂದರೆಗಳು ಎದುರಾದರೂ ಕೂಡಲೇ ಅದನ್ನು ಸರಿಪಡಿಸಲಿದೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


