ಡಿ.10ರ ನಂತರ ಬಸ್, ರೈಲ್ವೆ ಹಾಗೂ ಮೆಟ್ರೊದಲ್ಲೂ ಹಳೇ 500ರ ನೋಟು ಸ್ವೀಕಾರ ಇಲ್ಲ
ಹಳೆ 500 ರುಪಾಯಿಯನ್ನು ಮೆಟ್ರೊ, ರೈಲು ಹಾಗೂ ಬಸ್ ಟಿಕೆಟ್ ಗಾಗಿ ಡಿಸೆಂಬರ್ 10ರವರೆಗೆ ಮಾತ್ರ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.

Published On :
ನವದೆಹಲಿ: ಹಳೆ 500 ರುಪಾಯಿಯನ್ನು ಮೆಟ್ರೊ, ರೈಲು ಹಾಗೂ ಬಸ್ ಟಿಕೆಟ್ ಗಾಗಿ ಡಿಸೆಂಬರ್ 10ರವರೆಗೆ ಮಾತ್ರ ಬಳಸಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ.
ನೋಟ್ ಬದಲಾವಣೆಯನ್ನು ಸ್ಥಗಿತಗೊಳಿಸಿದ್ದ ಕೇಂದ್ರ ಹಣಕಾಸು ಸಚಿವಾಲಯ, ಪೆಟ್ರೋಲ್ ಬಂಕ್, ಮೆಡಿಕಲ್ ಶಾಪ್, ಆಸ್ಪತ್ರೆ ಸೇರಿದಂತೆ ಸರ್ಕಾರಿ ಸೇವೆಗಳಿಗೆ ಹಳೆ 500 ರುಪಾಯಿ ನೋಟ್ ಚಲಾವಣೆಗೆ ಡಿಸೆಂಬರ್ 15ರವರೆಗೆ ಅವಕಾಶ ನೀಡಿತ್ತು. ಆದರೆ ಇದೀಗ ಐದು ದಿನ ಕಡಿತಗೊಳಿಸಿ ಡಿಸೆಂಬರ್ 10ಕ್ಕೆ ಅಂತ್ಯಗೊಳಿಸಿದೆ.
ಕೇಂದ್ರ ಸರ್ಕಾರ ನಿಷೇಧ ಮಾಡಿರುವ 500 ಮತ್ತು 1000 ರು.ಮುಖಬೆಲೆಯ ಹಳೆಯ ನೋಟುಗಳನ್ನು ಸರ್ಕಾರಿ ಕಚೇರಿಗಳಲ್ಲಿ, ವಿದ್ಯುತ್ ಹಾಗೂ ನೀರಿನ ಬಿಲ್ ಕಟ್ಟಲು ನೀಡಿದ್ದ ಅವಕಾಶವನ್ನು ಎರಡು ಬಾರಿ ವಿಸ್ತರಿಸಿತ್ತು.
ಅಂಚೆಕಚೇರಿ, ಸರ್ಕಾರಿ ಆಸ್ಪತ್ರೆ, ಹಾಲಿನ ಕೇಂದ್ರ, ರೈಲ್ವೇ ಟಿಕೆಟ್ ಬುಕ್ಕಿಂಗ್, ಶವಾಗಾರಗಳು, ಹೆದ್ದಾರಿ ಟೋಲ್ ಕೇಂದ್ರ ಸೇರಿದಂತೆ ಇತರೆ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಕೇಂದ್ರಗಳಲ್ಲಿ ಹಳೆಯ ನೋಟುಗಳ ಚಲಾವಣೆಗೆ ಅನುವು ಮಾಡಿಕೊಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
railwaysbusDecember 10ಡಿಸೆಂಬರ್ 10ಬಸ್ರೈಲ್ವೆOld Rs 500 notesnot to be acceptedಹಳೆ 500 ರು.ನೋಟ್ಸ್ವೀಕರಿಸಲ್ಲ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


