ದೇಶ

ಜಮ್ಮು-ಕಾಶ್ಮೀರ ಬ್ಯಾಂಕ್ ಮೇಲೆ ದಾಳಿ: ರು.13 ಲಕ್ಷ ಹೊತ್ತೊಯ್ದ ಉಗ್ರರು

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿರುವ ಬ್ಯಾಂಕೊಂದರ ಮೇಲೆ ಉಗ್ರರು ಗುಂಪೊಂದು ದಾಳಿ ಮಾಡಿದ್ದು, ರು.10 ಲಕ್ಷ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿರುವ ಘಟನೆ ಗುರುವಾರ...

ಜಮ್ಮು-ಕಾಶ್ಮೀರ ಬ್ಯಾಂಕ್ ಮೇಲೆ ದಾಳಿ: ರು.13 ಲಕ್ಷ ಹೊತ್ತೊಯ್ದ ಉಗ್ರರು
ಜಮ್ಮು-ಕಾಶ್ಮೀರ ಬ್ಯಾಂಕ್ ಮೇಲೆ ದಾಳಿ: ರು.13 ಲಕ್ಷ ಹೊತ್ತೊಯ್ದ ಉಗ್ರರು
Published On :

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿರುವ ಬ್ಯಾಂಕೊಂದರ ಮೇಲೆ ಉಗ್ರರು ಗುಂಪೊಂದು ದಾಳಿ ಮಾಡಿದ್ದು, ರು.13 ಲಕ್ಷ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿರುವ ಘಟನೆ ಗುರುವಾರ ನಡೆದಿದೆ.

ದಕ್ಷಿಣ ಕಾಶ್ಮೀರದ ಹರಿಹಾಲ್ ಪ್ರದೇಶದಲ್ಲಿರುವ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ವೊಂದಕ್ಕೆ ಬಂದಿರುವ 4-5 ಜನರಿದ್ದ ಉಗ್ರರ ಗುಂಪೊಂದು ಏಕಾಏಕಿ ಬ್ಯಾಂಕ್ ಒಳ ನುಗ್ಗಿದೆ. ಈ ವೇಳೆ ಬ್ಯಾಂಕ್ ನಲ್ಲಿದ್ದ ರು.13 ಲಕ್ಷ ಹಣವನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ. ಬ್ಯಾಂಕ್ ನಿಂದ ಹೊರ ಬರುತ್ತಿದ್ದಂತೆ ಉಗ್ರರು ಗುಂಡಿನ್ನು ಹಾರಿಸಿ ಸ್ಥಳದಿಂದ ಕಾಲ್ಕಿತ್ತಿದ್ದರು ಎಂದು ತಿಳಿದುಬಂದಿದೆ.

ಇದೀಗ ಸ್ಥಳಕ್ಕೆ ದೌಡಾಯಿಸಿರುವ ಸೇನಾ ಪಡೆ ಉಗ್ರರಿಗಾಗಿ ಕಾರ್ಯಾಚರಣೆ ನಡೆಸುತ್ತಿದೆ. ಉಗ್ರರು ಒಟ್ಟು 13.38 ಲಕ್ಷವನ್ನು ಹೊತ್ತೊಯ್ದಿದ್ದು, ಹೊತ್ತೊಯ್ದಿರುವ ಹಣದಲ್ಲಿ 2.23 ಲಕ್ಷ ಹಣ ಹಳೆ ನೋಟುಗಳಿದ್ದು, 11.15 ಲಕ್ಷ ಹೊಸ ನೋಟುಗಳಿದ್ದವು ಎಂದು ಮೂಲಗಳಿಂದ ತಿಳಿದುಬಂದಿದೆ.

ಕಳೆದ ತಿಂಗಳೂ ಕೂಡ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಬ್ರಾಂಚ್ ಬ್ಯಾಂಕ್ ವೊಂದರಲ್ಲಿ ಇದೇ ರೀತಿಯ ಪ್ರಕರಣವೊಂದು ನಡೆದಿತ್ತು. ಉಗ್ರರ ಗುಂಪೊಂದು ಬ್ಯಾಂಕ್ ಮೇಲೆ ದಾಳಿ ಮಾಡಿ ರು. 12 ಲಕ್ಷ ಹಣವನ್ನು ಹೊತ್ತೊಯ್ದಿದ್ದರು. ಪ್ರಕರಣ ಸಂಬಂಧ ಅಧಿಕಾರಿಗಳು ಎಲ್'ಇಟಿ ಉಗ್ರ ಸಂಘಟನೆಗೆ ಸಹಾಯ ಮಾಡುತ್ತಿದ್ದ ಕೆಲ ಆರೋಪಿಗಳನ್ನು ಬಂಧನಕ್ಕೊಳಪಡಿಸಿ ತನಿಖೆ ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.