ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ 15 ಮುಖ್ಯಮಂತ್ರಿಗಳಿವರು
ಜಯಲಲಿತಾ ರಂತೆಯೇ ದೇಶದ ವಿವಿಧ ರಾಜ್ಯಗಳ ಸುಮಾರು 15 ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗಲೇ ವಿವಿಧ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದರು.

ಬೆಂಗಳೂರು: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅನಾರೋಗ್ಯದಿಂದಾಗಿ ಡಿಸೆಂಬರ್ 5 ರಂದು ಮೃತಪಟ್ಟಿದ್ದಾರೆ. ಜಯಲಲಿತಾ ರಂತೆಯೇ ದೇಶದ ವಿವಿಧ ರಾಜ್ಯಗಳ ಸುಮಾರು 15 ಮುಖ್ಯಮಂತ್ರಿಗಳು ಅಧಿಕಾರದಲ್ಲಿದ್ದಾಗಲೇ ವಿವಿಧ ಕಾರಣಗಳಿಂದಾಗಿ ಇಹಲೋಕ ತ್ಯಜಿಸಿದ್ದರು. ಮೃತ ಪಟ್ಟ ಎಲ್ಲಾ ಮುಖ್ಯಮಂತ್ರಿಗಳು ಜನನಾರುಗಿಗಳಾಗಿದ್ದರೋ ಇಲ್ಲವೋ ಎಂಬುದು ಇಲ್ಲಿ ಅಪ್ರಸ್ತುತ. ಆದರೆ ಅವರು ಸಾವನ್ನಪ್ಪಿದಾಗ ದೇಶದ ಜನತೆ ಆಘಾತಕ್ಕೊಳಗಾಗಿದ್ದು ಮಾತ್ರ ಸತ್ಯ. ಅಧಿಕಾರದಲ್ಲಿದ್ದಾಗಲೇ ಮೃತಪಟ್ಟ ದೇಶದ 15 ಮುಖ್ಯಮಂತ್ರಿಗಳ ವಿವರ ಇಲ್ಲಿದೆ.
ಗೋಪಿನಾಥ ಬೋರ್ ದೋರಲೋಯಿ: ಅಸ್ಸಾ ಮುಖ್ಯಮಂತ್ರಿಯಾಗಿದ್ದ ಗೋಪಿನಾಥ್ ಬೋರ್ ಡೋಲೋಯಿ 1950 ರ ಆಗಸ್ಟ್ 6 ರಂದು ಮೃತಪಟ್ಟಿದ್ದರು. ನಿಸ್ವಾರ್ಥಿ ಹಾಗೂ ಗಾಂಧಿವಾದಿಯಾಗಿದ್ದ ಬೋರದೋರಲಾಯಿ ಅವರಿಗೆ 1999 ರಲ್ಲಿ ಭಾರತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.
ರವಿಶಂಕರ್ ಶುಕ್ಲಾ: ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿದ್ದ ರವಿಶಂಕರ್ ಶುಕ್ಲಾ 1956 ಡಿಸೆಂಬರ್ 31 ರಂದು ನಿಧನರಾದರು.
ಶ್ರೀ ಕೃಷ್ಣ ಸಿಂಗ್: ಬಿಹಾರದ ಮೊತ್ತಮೊದಲ ಮುಖ್ಯಮಂತ್ರಿಯಾಗಿದ್ದ ಶ್ರೀ ಕೃಷ್ಣ ಸಿಂಗ್ 1961 ರ ಜನವರಿ 31 ರಂದು ಸಾವನ್ನಪ್ಪಿದ್ದರು.
ಬಿದನ್ ಚಂದ್ರ ರಾಯ್: ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಬಿದನ್ ಚಂದ್ರ ರಾಯ್ ಜುಲೈ 1 1962 ರಲ್ಲಿ ಮೃತಪಟ್ಟರು.
ಮರಾಟೋರಾವ್ ಕನ್ನಾಮ್ನರ್: ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಮರಾಟೋರಾವ್ ಕನ್ನಾಮ್ನರ್ 1963 ರ ನವೆಂಬರ್ 24 ರಂದು ನಿಧನರಾದರು.
ಸಿ.ಎನ್ ಅಣ್ಣಾದೊರೈ: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಅಣ್ಣಾ ಎಂದೇ ಪ್ರಸಿದ್ಧರಾಗಿದ್ದ ಸಿ.ಎನ್ ಅಣ್ಣಾದೊರೈ ಕ್ಯಾನ್ಸರ್ ನಿಂದಾಗಿ 1969 ರ ಪೆಬ್ರವರಿ 3 ರಂದು ಸಾವನ್ನಪ್ಪಿದ್ದರು.
ದಯಾನಂದ್ ಬಂಡೋದ್ಕರ್: ಗೋವಾ ಮುಖ್ಯಮಂತ್ರಿಯಾಗಿದ್ದ ದಯಾನಂದ್ ಬಂಡೋದ್ಕರ್ 1973 ರ ಆಗಸ್ಟ್ 12 ರಂದು ತಮ್ಮ 62 ನೇ ವಯಸ್ಸಿನಲ್ಲಿ ಸಾವನ್ನಪ್ಪಿದ್ದರು.
ಬರ್ಖತ್ ಉಲ್ಲಾ ಖಾನ್: ರಾಜಸ್ತಾನ ಮುಖ್ಯಮಂತ್ರಿಯಾಗಿದ್ದ ಬರ್ಖತ್ ಉಲ್ಲಾ ಖಾನ್ 1973 ರ ಅಕ್ಟೋಬರ್ 11 ರಂದು ಮೃತ ಪಟ್ಟಿದ್ದರು.
ಶೇಖ್ ಮೊಹಮದ್ ಅಬ್ದುಲ್ಲಾ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಶೇಖ್ ಅಬ್ದುಲ್ಲಾ ಶೇರ್- ಇ - ಕಾಶ್ಮೀರಿ ಎಂಬೇ ಖ್ಯಾತಿ ಪಡೆದಿದ್ದರು. 1982 ರ ಸೆಪ್ಟಂಬರ್ 8ರಂದು ಮೃತ ಪಟ್ಟಿದ್ದರು.
ಎಂ.ಜಿ ರಾಮಚಂದ್ರನ್: ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಜಿ ರಾಮಚಂದ್ರನ್ 1987ರ ಡಿಸೆಂಬರ್ 24 ರಂದು ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಎಂಜಿಆರ್ ಸಾವಿನ ನಂತರ ತಮಿಳುನಾಡಿನಲ್ಲಿ ಭಾರಿ ಪ್ರಮಾಣದ ದೊಂಬಿ ನಡೆದು ಗಲಭೆಕೋರರಿಗೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿತ್ತು. ಹಲವು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಚಿಮನ್ ಬಾಯ್ ಪಟೇಲ್: ಗುಜರಾತ್ ಮುಖ್ಯಮಂತ್ರಿಯಾಗಿದ್ದ ಚಿಮನ್ ಬಾಯ್ ಪಟೇಲ್ 1994ರ ಫೆಬ್ರವರಿ 17 ರಂದು ಸಾವನ್ನಪ್ಪಿದ್ದರು. ಹಿಂದೂ ಮತ್ತು ಜೈನರ ಹಬ್ಬಗಳಂದು ಎಲ್ಲಾ ರೀತಿಯ ಗೋಮಾಂಸ ಸೇರಿದಂತೆ ಎಲ್ಲಾ ರೀತಿಯ ಮಾಂಸ ಮಾರಾಟವನ್ನು ನಿಷೇಧಿಸಲು ಬಿಲ್ ಪಾಸು ಮಾಡಿದ ಮೊದಲ ಮುಖ್ಯಮಂತ್ರಿಯಾಗಿದ್ದರು.
ಬಿಯಾಂತ್ ಸಿಂಗ್: ಪಂಜಾಬ್ ಮುಖ್ಯಮಂತ್ರಿಯಾಗಿದ್ದ ಬಿಯಾಂತ್ ಸಿಂಗ್ 1995ರ ಆಗಸ್ಟ್ 31 ಆತ್ಮಾಹುತಿ ಕಾರ್ ಬಾಂಬ್ ದಾಳಿಗೆ ಬಲಿಯಾದರು.
ವೈ.ಎಸ್ ರಾಜಶೇಖರ ರೆಡ್ಡಿ: ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿದ್ದ ವೈ.ಎಸ್ ರಾಜಶೇಖರ ರೆಡ್ಡಿ 2009 ರ ಸೆಪ್ಟಂಬರ್ 2 ರಂದು ವಿಮಾನ ದುರಂತದಲ್ಲಿ ಅಕಾಲಿಕ ಮರಣಕ್ಕೀಡಾದರು.
ದೋರ್ಜಿ ಖಂಡು: ಅರುಣಾಚಲ ಪ್ರದೇಶ ಮುಖ್ಯಮಂತ್ರಿಯಾಗಿದ್ದ ದೋರ್ಜಿ ಖಂಡು 2011 ಎಪ್ರಿಲ್ 30 ರಂದು ಹೆಲಿಕಾಪ್ಟರ್ ಪತನವಾಗಿ ದುರಂತ ಸಾವಿಗೀಡಾದರು.
ಮುಫ್ತಿ ಮೊಹಮದ್ ಸಯ್ಯೀದ್: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮದ್ ಸಯ್ಯೀದ್ 2016 ಜನವರಿ 7 ರಂದು ಸಾವನ್ನಪ್ಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


