ಕಾಶ್ಮೀರದ ಶೇಕ್ ಅಬ್ದುಲ್ಲಾ ನಿಧನರಾದ ದಿನವನ್ನು ನೆನಪಿಸುತ್ತಿದೆ ಜಯಲಲಿತಾ ಸಾವು
ಇಡೀ ತಮಿಳುನಾಡನ್ನೇ ಶೋಕ ಸಾಗರದಲ್ಲಿ ಮುಳುಗಿಸಿರುವ ಜಯಲಲಿತಾ ಸಾವು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಶೇಕ್ ಅಬ್ದುಲ್ಲಾ ಸತ್ತ ದಿನವನ್ನು ...

ಶ್ರೀನಗರ: ಇಡೀ ತಮಿಳುನಾಡನ್ನೇ ಶೋಕ ಸಾಗರದಲ್ಲಿ ಮುಳುಗಿಸಿರುವ ಜಯಲಲಿತಾ ಸಾವು ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸಂಸ್ಥಾಪಕ ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಶೇಕ್ ಅಬ್ದುಲ್ಲಾ ಸತ್ತ ದಿನವನ್ನು ನೆನಪಿಸುತ್ತಿದೆ.
1903 ರಲ್ಲಿ ಜನಿಸಿದ್ದ, ಶೇಕ್ ಅಬ್ದುಲ್ಲಾ ಜಯಲಲಿತಾರಂತೆ ಅಪಾರ ಪ್ರಮಾಣದ ಅಭಿಮಾನಿಗಳು, ಹಿಂಬಾಲಕರು ಹಾಗೂ ಬೆಂಬಲಿಗರನ್ನು ಹೊಂದಿದ್ದರು.
ತಮ್ಮ ಆಡಳಿತಾವಧಿಯಲ್ಲಿ ಇಬ್ಬರು ನಾಯಕರು ಭ್ರಷ್ಟಾಚಾರದ ಕೊಳೆಯನ್ನು ಸಾಕಷ್ಟು ಮೆತ್ತಿಕೊಂಡಿದ್ದರು. ಆದರೆ ಇಬ್ಬರು ನಾಯಕರುಗಳ ಅಭಿಮಾನಿಗಳ ಕಣ್ಣಿಗೆ ಅವರು ಮಾಡಿದ್ದ ತಪ್ಪು ಕಾಣಿಸಲೇ ಇಲ್ಲ.
ಶೇಕ್ ಅಬ್ದುಲ್ಲಾ ಮತ್ತು ಜಯಲಲಿತಾ ತಮ್ಮ ಅಭಿಮಾನಿಗಳ ಪಾಲಿಗೆ ರಾಜಕೀಯ ಗಡಿ ಮೀರಿದ ವ್ಯಕ್ತಿಗಳಾಗಿದ್ದರು. ಈ ಇಬ್ಬರು ಸೂಪರ್ ಹ್ಯೂಮನ್ ಪವರ್ ಹೊಂದಿದ್ದವರಾಗಿದ್ದರು. ಅವರಿಗೆ ಸಾವೇ ಇಲ್ಲ ಎಂದು ಅಭಿಮಾನಿಗಳು ಭಾವಿಸಿದ್ದರು.
ಆದರೆ ಈ ಇಬ್ಬರ ಸಾವನ್ನು ಅವರ ಅನುಯಾಯಿಗಳು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸೂಪರ್ ಹ್ಯೂಮನ್ ಯಾವತ್ತೂ ಸಾಯುವುದಿಲ್ಲ ಎಂಬ ನಂಬಿಕೆ ಬೆಳೆಸಿಕೊಂಡಿದ್ದರು.
ಹಲವು ದಿನಗಳ ಅನಾರೋಗ್ಯದ ನಂತರ 1982 ರ ಸೆಪ್ಟಂಬರ್ 8 ರಂದು ಶೇಕ್ ಅಬ್ದುಲ್ಲಾ ನಿಧನರಾಗಿದ್ದರು, ಅನಾರೋಗ್ಯದಿಂದ ನರಳುತ್ತಿದ್ದ ಶೇಕ್ ಅಬ್ದುಲ್ಲಾ ಸತ್ತಿದ್ದಾರೆಂದು ಹಲವು ಬಾರಿ ಸುಳ್ಳು ಸುದ್ದಿ ಹರಡಿತ್ತು. ಈ ಸುದ್ದಿಯನ್ನು ಗೇಲಿ ಮಾಡಲು ಹಾಕಿದ್ದಾರೆಂದು ಭಾರಿ ಪ್ರಮಾಣದ ಗಲಾಟೆ ನಡೆದಿತ್ತು.
ಶೇಖ್ ಅಬ್ದುಲ್ಲಾ ಸಾವನ್ನು ಅಧಿಕೃತವಾಗಿ ಘೋಷಿಸುವ ಮುನ್ನ ಬೇಸಿಗೆ ರಾಜಧಾನಿ ಜಮ್ಮು ಮತ್ತು ಕಾಶ್ಮೀರದಲ್ಲಿ , ಶೇಕ್ ಸಾವನ್ನು ಸುಳ್ಳಾಗಿಸುವಂತೆ ಬೇಡಿಕೊಂಡು ನೂರಾರು ಕುರಿಗಳನ್ನು ಬಲಿ ಕೊಡಲಾಗಿತ್ತು. ಮಾರುಕಟ್ಟೆ ಸ್ಥಗಿತಗೊಂಡಿತ್ತು, ವ್ಯಪಾರ ನಿಲ್ಲಿಸಲಾಗಿತ್ತು.ಇಡೀ ಕಾಶ್ಮೀರವೇ ರಸ್ತೆಗಿಳಿದಿತ್ತು.ಶೇಕ್ ಆರೋಗ್ಯದ ಬಗ್ಗೆ ಹೊಸ ಮಾಹಿತಿ ಪಡೆಯ.ಲು ಇಡೀ ಕಾಶ್ಮೀರದ ಜನತೆ ಉಸಿರು ಬಿಗಿಹಿಡಿದು ಕಾಯುತ್ತಿದ್ದರು.
ಆದರೆ ಸಂಜೆ ವೇಳೆ ಶೇಖ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಇಡೀ ಕಾಶ್ಮೀರ ಕತ್ತಲೆಯಲ್ಲಿ ಮುಳುಗಿ ಹೋಗಿತ್ತು. ಶೇಖ್ ಶವ ಸಾಗುವ ದಾರಿಯಲ್ಲಿ ಮಹಿಳೆಯರು ಪುರುಷರು, ಮಕ್ಕಳು ಸೇರಿದಂತೆ ಎಲ್ಲರು ತನ್ನ ಎದೆ ಬಡಿದುಕೊಂಡು ಅತ್ತಿದ್ದರು.
ಶ್ರೀನಗರದ ಪೋಲೋ ಗ್ರೌಂಡ್ ನಲ್ಲಿ ಶೇಖ್ ಶವವನ್ನು ಇಡಲಾಗಿತ್ತು. ಇಂದು ಚೆನ್ನೈನಲ್ಲಿ ನಾವು ನೋಡುತ್ತಿರುವಂತೆ ಅಂದು ಶ್ರೀನಗರದಲ್ಲಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದುಕೊಳ್ಳಲು ಲಕ್ಷಾಂತರ ಮಂದಿ ಧಾವಿಸಿದ್ದರು.
ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಶೇಖ್ ಅಬ್ದುಲ್ಲಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿ ಒಟ್ಟಿಗೆ ಭಾಗವಹಿಸಿದ್ದನ್ನು ನಾವು ಕಾಣಬಹುದಾಗಿತ್ತು. ರಾಷ್ಟ್ರಧ್ವಜದಲ್ಲಿ ಶೇಖ್ ದೇಹವನ್ನು ಸುತ್ತಲಾಗಿತ್ತು. ಅಂತ್ಯ ಸಂಸ್ಕಾರ ನಡೆಸಲು ಮರವಣಿಗೆಯಲ್ಲಿ ಕರೆದೊಯ್ಯಲಾಗುತ್ತಿತ್ತು. 10 ಕಿಮೀ ಕ್ರಮಿಸಲು 8 ಗಂಟೆ ಸಮಯ ಹಿಡಿಯಿತು. ಮೆರವಣಿಗೆ ವೇಳೆ ನೂಕು ನುಗ್ಗಾಟದಿಂದ ಕಾಲ್ತುಳಿತ ಉಂಟಾಯಿತು. ಅಂದು ನಡೆದಿದ್ದ ಘಟನೆಗಳ ನೆನಪನ್ನು ಇಂದು ಜಯಲಲಿತಾ ಸಾವು ಎಲ್ಲವನ್ನು ನೆನಪಿಸುತ್ತಿದೆ ಎಂದು ಮುಜಾಫರ್ ಅಹಮದ್ ಎಂಬ ಪ್ರೊಫೆಸರ್ ಅಭಿಪ್ರಾಯ ಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


