ದೇಶ

ನೋಟು ನಿಷೇಧ: ಪ್ರಧಾನಿ ಮೋದಿ ಆಪರೇಷನ್ ಯಶಸ್ವಿ, ರೋಗಿ ನೋವಿನಲ್ಲಿದ್ದಾನೆ: ಶರದ್ ಪವಾರ್

ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಯಶಸ್ವಿಯಾಗಿ ಮುಗಿಸಿದ್ದು ಆದರೆ ಸರಿಯಾಗಿ ಯೋಜನೆ ರೂಪಿಸದ ಕಾರಣ ರೋಗಿ...

ನೋಟು ನಿಷೇಧ: ಪ್ರಧಾನಿ ಮೋದಿ ಆಪರೇಷನ್ ಯಶಸ್ವಿ, ರೋಗಿ ನೋವಿನಲ್ಲಿದ್ದಾನೆ: ಶರದ್ ಪವಾರ್
ಶರದ್ ಪವಾರ್
Published On :
ಪುಣೆ: ನೋಟು ನಿಷೇಧ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಪರೇಷನ್ ಯಶಸ್ವಿಯಾಗಿ ಮುಗಿಸಿದ್ದು ಆದರೆ ಸರಿಯಾಗಿ ಯೋಜನೆ ರೂಪಿಸದ ಕಾರಣ ರೋಗಿ ಬದುಕುವ ಬಗ್ಗೆ ಶಂಕೆ ಇದೆ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ. 
ಪುಣೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪವಾರ್, ನೋಟು ನಿಷೇಧ ಕುರಿತಂತೆ ದೆಹಲಿಯಲ್ಲಿ ಅನೇಕರು ನನ್ನ ಅಭಿಪ್ರಾಯ ಕೇಳಿದರು. ಆಗ ವೈದ್ಯರೇನೋ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಸರ್ಜರಿ ನಂತರದ ಆರೈಕೆಯ ಕೊರೆತೆಯಿಂದಾಗಿ ರೋಗಿ ಸಾಯುತ್ತಾನೋ ಬದುಕುತ್ತಾನೋ ಎಂಬ ಶಂಕೆ ಇದೆ ಎಂದು ಹೇಳಿದ್ದಾಗಿ ಕಾರ್ಯಕರ್ತರಿಗೆ ತಿಳಿಸಿದ್ದಾರೆ. 
ನೋಟು ನಿಷೇಧದಿಂದಾಗಿ ಗ್ರಾಮೀಣ ಪ್ರದೇಶದ ಜನರು ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರೆಲ್ಲಾ ಸಹಕಾರಿ ಬ್ಯಾಂಕ್ ಗಳನ್ನೇ ಅವಲಂಭಿಸಿದ್ದಾರೆ. ಆದರೆ ಹೊಸ ಕಾನೂನಿನ ಪ್ರಕಾರ ಹಳೇ ನೋಟುಗಳ ಡಿಪಾಸಿಟ್ ಮಾಡುವುದಕ್ಕಾಗಲಿ ಅಥವಾ ಬದಲಾವಣೆ ಮಾಡುವುದಕ್ಕಾಗಿ ಅವಕಾಶವಿಲ್ಲ. ಈಗಿದ್ದರು ಗ್ರಾಮೀಣ ಬ್ಯಾಂಕ್ ಗಳಲ್ಲಿ 4,500 ಕೋಟಿಯಷ್ಟು ಹಣ ಡಿಪಾಸಿಟ್ ಆಗಿದೆ ಎಂದರು. 
ಸಹಕಾರಿ ಬ್ಯಾಂಕ್ ಗಳಲ್ಲಿ ಡಿಪಾಸಿಟ್ ಆಗಿರುವ ನೋಟುಗಳನ್ನು ದೊಡ್ಡ ಬ್ಯಾಂಕ್ ಗಳು ತೆಗೆದುಕೊಳ್ಳಲು ಸಿದ್ಧವಿಲ್ಲ. ಹೀಗಾಗಿ ಸಹಕಾರಿ ಬ್ಯಾಂಕ್ ಗಳು ಸಂಕಷ್ಟದಲ್ಲಿವೆ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.