ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶೆಹನಾಯ್ ಕಳ್ಳತನ
ವಾರಣಾಸಿಯ ಟೆಂಪಲ್ ಟೈನ್ ನಲ್ಲಿರುವ ಭಾರತ ರತ್ನ ಬಿಸ್ಮಿಲ್ಲಾ ಅವರ ಮಗನ ಮನೆಯಿಂದ ಐದು ಶೆಹನಾಯ್ ಗಳು...

ವಾರಣಾಸಿ: ವಾರಣಾಸಿಯ ಟೆಂಪಲ್ ಟೈನ್ ನಲ್ಲಿರುವ ಭಾರತ ರತ್ನ ಬಿಸ್ಮಿಲ್ಲಾ ಅವರ ಮಗನ ಮನೆಯಿಂದ ಐದು ಶೆಹನಾಯ್ ಗಳು ಕಳ್ಳತನವಾಗಿವೆ.
ಬಿಸ್ಮಿಲ್ಲಾ ಖಾನ್ ಅವರ ಪುತ್ರ ಕಾಜೀಮ್ ಹುಸೇನ್ ನವೆಂಬರ್ 30 ಭಾನುವಾರ ತಡರಾತ್ರಿ ಮನೆಗೆ ಬಂದಿದ್ದಾರೆ. ಈ ವೇಳೆ ಮೇನ್ ಗೇಟ್ ಗೆ ಹಾಕಿದ್ದ ಲಾಕ್ ಮುರಿದಿರುವುದು ಕಂಡು ಬಂದಿದೆ.
ಮನೆ ಒಳಗೆ ಬಂದು ನೋಡಿದಾಗ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ಸೇರಿದಂತೆ ಹಲವು ಅಪರೂಪದ ಉಡುಗೊರೆಗಳು ಕಳವಾಗಿರುವುದು ತಿಳಿದು ಬಂದಿದೆ. ಬೆಳ್ಳಿ ಹಾಗೂ ಮರದಿಂದ ಮಾಡಿದ್ದ ಶೆಹನಾಯ್, ಅದರಲ್ಲೂ ಅತ್ಯಮೂಲ್ಯವಾದ ಮರದ ಶೆಹನಾಯ್ ಕಳುವಾಗಿದೆ ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


