ಆಸ್ಪತ್ರೆಯಲ್ಲಿದ್ದುಕೊಂಡೆ ಕಷ್ಟ ಎಂದವರಿಗೆ ಸಹಾಯ ಹಸ್ತ ಚಾಚುತ್ತಿರುವ ಸುಷ್ಮಾ ಸ್ವರಾಜ್
ವಿದೇಶಾಂಘ ಸಚಿವೆ ಸುಷ್ಮಾ ಸ್ವರಾಜ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಯ ಬೆಡ್ ನಿಂದಲೇ...

ನವದೆಹಲಿ: ವಿದೇಶಾಂಘ ಸಚಿವೆ ಸುಷ್ಮಾ ಸ್ವರಾಜ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಆಸ್ಪತ್ರೆಯ ಬೆಡ್ ನಿಂದಲೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ ಕರ್ತವ್ಯನಿಷ್ಠೆ ಮರೆಯುತ್ತದ್ದಾರೆ.
ಸಂಕಷ್ಟದಲ್ಲಿರುವವರಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ ಪಿಎಚ್ ಡಿ ಸ್ಕಾಲರ್ ಆಗಿರುವ ಗೀತಾ ಸಿಂಗ್ ಎಂಬುವರು ಟ್ವೀಟರ್ ನಲ್ಲಿ ಸುಷ್ಮಾ ಅವರಿಗೆ ನಾನು ಆಸ್ಟ್ರೇಲಿಯಾದಲ್ಲಿ ಪೇಪರ್ ಪ್ರೆಸೆಂಟ್ ಮಾಡಬೇಕು ಹೀಗಾಗಿ ನನಗೆ ಆಸ್ಟ್ರೇಲಿಯಾಗೆ ತೆರಳಲು ವೀಸಾ ಬೇಕಿದ್ದು ಸಹಾಯ ಮಾಡುವಂತೆ ಕೋರಿದ್ದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಸುಷ್ಮಾ ಅವರು ಗೀತಾ-ನಾನು ಏಮ್ಸ್ ಆಸ್ಪತ್ರೆಯಲ್ಲೇ ಇದ್ದಿನೀ ಬಂದು ನನ್ನನ್ನು ಭೇಟಿ ಮಾಡು ನನ್ನ ಕೈಲಾಗುವ ಸಹಾಯ ಮಾಡುತ್ತೇನೆ ಎಂದು ರೀ ಟ್ವೀಟ್ ಮಾಡಿದ್ದಾರೆ.
ಇನ್ನು ನಿನ್ನೆಯಷ್ಟೇ ಲಂಡನ್ ಮೂಲದ ಅನಿವಾಸಿ ಭಾರತೀಯ ಕುನ್ವಾರ್ ಬಿಶ್ತ್ ಗೆ ಅವರು ತಂದೆ ಅನಾರೋಗ್ಯದಿಂದ ಬಳಲುತ್ತಿದ್ದು ಭಾರತಕ್ಕೆ ಬರಲು ಪಾಸ್ ಪೋರ್ಟ್ ರಿನಿವಲ್ ಮಾಡಿಕೊಳ್ಳುವ ಸಮಸ್ಯೆ ಎದುರಾಗಿದ್ದು ನನಗೆ ಸಹಾಯ ಮಾಡುವಂತೆ ಕೋರಿದ್ದರು. ಇದಕ್ಕೆ ರೀ ಟ್ವೀಟ್ ಮಾಡಿದ್ದ ಸುಷ್ಮಾ ಸ್ವರಾಜ್ ಲಂಡನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ನಿಮಗೆ ಸಹಾಯ ಮಾಡುತ್ತೆ ಎಂದು ಟ್ವೀಟಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


