ಅಫ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ಬೇಷರತ್ ಬೆಂಬಲ ನೀಡಿದೆ: ಅಶ್ರಫ್ ಘನಿ
ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಭಾರತ ತಮ್ಮ ದೇಶದ ಅಭಿವೃದ್ಧಿಗೆ ಬೇಷರತ್ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ.

Published On :
ಅಮೃತ್ ಸರ: ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ, ಭಾರತ ತಮ್ಮ ದೇಶದ ಅಭಿವೃದ್ಧಿಗೆ ಬೇಷರತ್ ಬೆಂಬಲ ನೀಡಿದೆ ಎಂದು ಹೇಳಿದ್ದಾರೆ.
ಭಾರತ-ಅಪ್ಘಾನಿಸ್ತಾನ-ಇರಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಚಾಬಹಾರ್ ಬಂದರು ಯೋಜನೆಯ ಬಗ್ಗೆಯೂ ಮಾತನಾಡಿರುವ ಅಶ್ರಫ್ ಘನಿ, ಚಾಬಹಾರ್ ಬಂದರು ಪ್ರಾದೇಶಿಕ ವಾಣಿಜ್ಯ ವಹಿವಾಟು ಹಾಗೂ ಸಂಪರ್ಕದ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಹೇಳಿದ್ದಾರೆ.
ಸಲ್ಮಾ ಜಲಾಶಯ ನಿರ್ಮಾಣಕ್ಕೆ ಭಾರತದ ಕೊಡುಗೆಯನ್ನು ಸ್ಮರಿಸಿರುವ ಅಶ್ರಫ್ ಘನಿ, 2016 ರ ಜೂನ್ ನಲ್ಲಿ ಪ್ರಧಾನಿ ಮೋದಿ ಅಪ್ಘಾನಿಸ್ತಾನ-ಭಾರತ ಸ್ನೇಹದ ಸಂಕೇತವಾಗಿರುವ ಜಲಾಶಯವನ್ನು ಉದ್ಘಾಟಿಸಿದ್ದನ್ನು ನೆನೆದಿದ್ದಾರೆ. ಅಪ್ಘಾನಿಸ್ತಾನದ ಅಭಿವೃದ್ಧಿಗೆ ಭಾರತ ನೀಡುತ್ತಿರುವ ಸಹಕಾರ, ಬೆಂಬಲ ಪಾರದರ್ಶಕವಾಗಿದ್ದು ಯಾವುದೇ ಷರತ್ತುಗಳಿಲ್ಲ ಎಂದು ಅಶ್ರಫ್ ಘನಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


