ಅಶ್ರಫ್ ಘನಿ

ರಕ್ತಪಾತ ತಪ್ಪಿಸಲು ಅಫ್ಘಾನಿಸ್ತಾನ ತೊರೆದೆ- ಅಶ್ರಫ್ ಘನಿ
ಅಫ್ಘಾನಿಸ್ತಾನದ ಅಧ್ಯಕ್ಷರ ಪ್ಯಾಲೇಸ್ ಗೆ ಉಗ್ರರು ಲಗ್ಗೆ ಹಾಕಿ ಕಾಬೂಲ್ ತಾಲಿಬಾನ್ ವಶಕ್ಕೆ ಒಳಪಟ್ಟರಿಂದ ರಕ್ತಪಾತವನ್ನು ತಡೆಯುವ ನಿಟ್ಟಿನಲ್ಲಿ ದೇಶ ತೊರೆದಿದ್ದಾಗಿ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿ ಉಟ್ಟ ಬಟ್ಟೆಯಲ್ಲಿಯೇ ದೇಶ ಬಿಟ್ಟು ಹೋಗಿದ್ದರು: ಮಾಜಿ ಹಿರಿಯ ಅಧಿಕಾರಿ
ಅಫ್ಘಾನಿಸ್ತಾನದ ಪದಚ್ಯುತ ಅಧ್ಯಕ್ಷ ಅಶ್ರಫ್ ಘನಿಯವರು ತಾಲಿಬಾನಿಗಳು ರಾಜಧಾನಿ ಸೇರಿದಂತೆ ದೇಶವನ್ನು ವಶಪಡಿಸಿಕೊಳ್ಳುವಾಗ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ, ಉಟ್ಟ ಬಟ್ಟೆಯಲ್ಲಿಯೇ ಕಳೆದ ಭಾನುವಾರ ದೇಶ ಬಿಟ್ಟು ಹೋಗಿದ್ದರು ಎಂದು ಪದಚ್ಯುತ ಸರ್ಕಾರದ ಮಾಜಿ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

'ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆ, ಪ್ರಾಣಭೀತಿಯಿಂದ ಪರಾರಿಯಾಗಿಲ್ಲ': ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ
ತಾಲಿಬಾನ್ ಉಗ್ರರಿಂದ ದೇಶದಲ್ಲಾಗಬಹುದಾದ ಸಂಭಾವ್ಯ ರಕ್ತಪಾತ ತಪ್ಪಿಸಲು ದೇಶ ತೊರೆದೆನೇ ಹೊರತು ಪ್ರಾಣಭೀತಿಯಿಂದ ಪರಾರಿಯಾಗಿಲ್ಲ ಎಂದು ಆಫ್ಘನ್ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

ಪರಾರಿಯಾಗಿದ್ದ ಆಫ್ಘನ್ ಅಧ್ಯಕ್ಷ ಯುಎಇನಲ್ಲಿ ಪತ್ತೆ, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ಎಂದ ಯುಎಇ ಸರ್ಕಾರ!
ತಾಲಿಬಾನ್ ಬಂಡುಕೋರರ ದಾಳಿ ಬಳಿಕ ಆಫ್ಘಾನಿಸ್ತಾನದಿಂದ ಪರಾರಿಯಾಗಿದ್ದ ಅಧ್ಯಕ್ಷ ಅಶ್ರಫ್ ಘನಿ ಯುಎಇಯಲ್ಲಿ ಪತ್ತೆಯಾಗಿದ್ದು, ಮಾನವೀಯ ನೆಲೆಗಟ್ಟಿನಲ್ಲಿ ಆಶ್ರಯ ನೀಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ತಾಲಿಬಾನ್ ಬಿಕ್ಕಟ್ಟು: ಆಫ್ಘಾನಿಸ್ತಾನದಲ್ಲಿರುವ ಭಾರತೀಯರ ನೆರವಿಗೆ ಸಹಾಯವಾಣಿ ತೆರೆದ ವಿದೇಶಾಂಗ ಸಚಿವಾಲಯ
ತಾಲಿಬಾನ್ ಅಟ್ಟಹಾಸದಿಂದಾಗಿ ನಲುಗಿ ಹೋಗಿರುವ ಆಫ್ಘಾನಿಸ್ತಾನದಲ್ಲಿನ ಭಾರತೀಯರ ನೆರವಿಗೆ ವಿದೇಶಾಂಗ ಸಚಿವಾಲಯ ಧಾವಿಸಿದ್ದು, ಭಾರತೀಯರ ನೆರವಿಗೆ ಸಹಾಯವಾಣಿ ತೆರೆದಿದೆ.

ತಾಲಿಬಾನ್ ದಾಳಿ: ಹೆಲಿಕಾಪ್ಟರ್, ಕಾರುಗಳಲ್ಲಿ ಹಣ ಹೊತ್ತು ಆಫ್ಘನ್ ಪ್ರಧಾನಿ ಅಶ್ರಫ್ ಘನಿ ಪರಾರಿ!
ತಾಲಿಬಾನ್ ದಾಳಿ ಉಗ್ರರ ದಾಳಿ ಬೆನ್ನಲ್ಲೇ ಆಫ್ಘಾನಿಸ್ತಾನ ತೊರೆದಿದ್ದ ಅಧ್ಯಕ್ಷ ಅಶ್ರಫ್ ಘನಿ.. ದೇಶ ಬಿಡುವ ಮೊದಲು ಕಾರು ಮತ್ತು ಹೆಲಿಕಾಪ್ಟರ್ ನಲ್ಲಿ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ನಮ್ಮ ಕೈಕಟ್ಟಿ ಹಾಕಿ ಉಗ್ರರಿಗೆ ದೇಶ ಮಾರಾಟ ಮಾಡಿದ್ದಾರೆ: ಆಫ್ಘಾನ್ ಅಧ್ಯಕ್ಷರ ವಿರುದ್ಧ ರಕ್ಷಣಾ ಸಚಿವರ ಕಿಡಿ
ತಾಲಿಬಾನಿಗಳು ಅಂದುಕೊಂಡದ್ದಕ್ಕಿಂತ ವೇಗವಾಗಿ ಕಾಬೂಲ್ ಗೆ ಲಗ್ಗೆ ಇಟ್ಟಿದ್ದರು. ಇದರಿಂದ ಹೆದರಿ ತಾಲಿಬಾನಿಗಳಿಗೆ ಅಧಿಕಾರ ಹಸ್ತಾಂತರ ಮಾಡಿ, ದೇಶ ಬಿಟ್ಟು ಪಲಾಯನ ಮಾಡಿರುವ ಅಧ್ಯಕ್ಷ ಅಶ್ರಫ್ ಘನಿ ವಿರುದ್ಧ ರಕ್ಷಣಾ ಸಚಿವರು ಕಿಡಿಕಾರಿದ್ದಾರೆ.

ಆಫ್ಘನ್ ಬಿಕ್ಕಟ್ಟು: ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರದಿಂದ ಕ್ರಮ
ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಕಾಬುಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಗಂಭೀರ ಚಿಂತನೆ ನಡೆಸಿದೆ.

'ಮಾಜಿ ಅಧ್ಯಕ್ಷ ಅಶ್ರಫ್ ಘನಿ'...!!!: ಪ್ರಧಾನಿ ಹುದ್ದೆಗೆ ಅಶ್ರಫ್ ರಾಜಿನಾಮೆ?, ಆಫ್ಘನ್ ಆಡಳಿತ ತಾಲಿಬಾನ್ ತೆಕ್ಕೆಗೆ!
ಆಫ್ಘಾನಿಸ್ಕಾನ ಆಡಳಿತ ತಾಲಿಬಾನ್ ತೆಕ್ಕೆಗೆ ಜಾರುತ್ತಿದ್ದು, ಪ್ರಧಾನಿ ಹುದ್ದೆಗೆ ಅಶ್ರಫ್ ಘನಿ ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

