ದೇಶ

ತೆಲಂಗಾಣ: ಲಾರಿಗಳ ನಡುವೆ ಸಿಕ್ಕಿ ಟವೇರಾ ನಜ್ಜುಗುಜ್ಜು, 8 ಸಾವು

ಎರಡು ಲಾರಿಗಳ ನಡುವೆ ಸಿಕ್ಕಿ ಟವೇರಾ ಕಾರೊಂದು ನಜ್ಜುಗುಜ್ಜಾಗಿದ್ದು ಪರಿಣಾಮ 8 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ...

ತೆಲಂಗಾಣ: ಲಾರಿಗಳ ನಡುವೆ ಸಿಕ್ಕಿ ಟವೇರಾ ನಜ್ಜುಗುಜ್ಜು, 8 ಸಾವು
ಅಪಘಾತ
Published On :

ಹೈದರಾಬಾದ್: ಎರಡು ಲಾರಿಗಳ ನಡುವೆ ಸಿಕ್ಕಿ ಟವೇರಾ ಕಾರೊಂದು ನಜ್ಜುಗುಜ್ಜಾಗಿದ್ದು ಪರಿಣಾಮ 8 ಮಂದಿ ದಾರುಣ ಸಾವನ್ನಪ್ಪಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಂಗಾರೆಡ್ಡಿ ಜಿಲ್ಲೆಯ ಸುತಾರಿಗುಡ ಬಳಿಯ ಟೋಲ್ ಗೇಟ್ ಬಳಿ ಈ ದುರ್ಘಟನೆ ಸಂಭವಿಸಿದೆ. ಟೋಲ್ ಕಟ್ಟಲು ನಿಂತಿದ್ದ ಲಾರಿಗೆ ಟವೇರಾ ಕಾರು ಡಿಕ್ಕಿ ಹೊಡೆದಿದೆ ಇದರ ಹಿಂದೆ ಬಂರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಟವೇರಾ ಕಾರಿಗೆ ಗುದ್ದಿದ್ದು ಎರಡು ಲಾರಿಗಳ ನಡುವೆ ಸಿಕ್ಕಿ ಟವೇರಾ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ 8 ಮಂದಿ ಮೃತಪಟ್ಟಿದ್ದಾರೆ. ಇನ್ನು ಅಪಘಾತದಲ್ಲಿ ಗಾಯಗೊಂಡಿರುವ ಓರ್ವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಮಹಮ್ಮದ್, ಅಖಿಲ್, ಅಕ್ಬರ್, ಇಮ್ರೋಜ್, ಇರ್ಫಾನ್, ಫಿರೋಜ್, ನಿಶಾದ್ ಹಾಗೂ ಶೇಖಾವತ್ ಎಂದು ಗುರುತಿಸಲಾಗಿದೆ.

ಟವೇರಾ ಕಾರಿನಲ್ಲಿ 8 ಮಂದಿ ಸದಾಶಿವಪೇಟ್ ನಿಂದ ಕೊಂಪಲ್ಲಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.