ದೇಶ

ಕಾವೇರಿ ನೀರು ವಿವಾದ: ತಮಿಳುನಾಡಿನಲ್ಲಿ ಕಾವೇರಿದ ಪ್ರತಿಭಟನೆ, 200 ಜನರ ಬಂಧನ

ಕಾವೇರಿ ನೀರು ವಿವಾದ ಕುರಿತಂತೆ ತಮಿಳುನಾಡಿನಾದ್ಯಂತ ಪ್ರತಿಭಟನೆ ಕಾವೇರಿದ್ದು, 200 ಕ್ಕೂ ಹೆಚ್ಚು ರೈತರನ್ನು ಬಂಧನಕ್ಕೊಳಪಡಿಸಿರುವುದಾಗಿ ಮಂಗಳವಾರ...

ಕಾವೇರಿ ನೀರು ವಿವಾದ: ತಮಿಳುನಾಡಿನಲ್ಲಿ ಕಾವೇರಿದ ಪ್ರತಿಭಟನೆ, 200 ಜನರ ಬಂಧನ
ಕಾವೇರಿ ನೀರು ಆಗ್ರಹಿಸಿ ತಿರುಚಿಯಲ್ಲಿ ರೈತರು ಸತ್ಯಾಗ್ರಹ ನಡೆಸುತ್ತಿರುವುದು.
Published On :

ತಿರುಚಿ: ಕಾವೇರಿ ನೀರು ವಿವಾದ ಕುರಿತಂತೆ ತಮಿಳುನಾಡಿನಾದ್ಯಂತ ಪ್ರತಿಭಟನೆ ಕಾವೇರಿದ್ದು, 200 ಕ್ಕೂ ಹೆಚ್ಚು ರೈತರನ್ನು ಬಂಧನಕ್ಕೊಳಪಡಿಸಿರುವುದಾಗಿ ಮಂಗಳವಾರ ತಿಳಿದುಬಂದಿದೆ.

ಕಾವೇರಿ ನದಿಯಲ್ಲಿ 50 ಟಿಎಂಸಿಗಿಂತಲೂ ನೀರು ಕಡಿಮೆಯಿದ್ದು, ಕರ್ನಾಟಕದ ಜನರಿಗೇ ಕುಡಿಯುವುದಕ್ಕೆ 40 ಟಿಎಂಸಿ ನೀರಿನ ಅಗತ್ಯವಿದೆ. ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿದ್ದು, ನೀರಿನ ಅಭಾವ ಉಂಟಾಗಿದೆ. ಹೀಗಾಗಿ ತಮಿಳುನಾಡಿಗೆ ಪಾಲಿನ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಈ ಹಿಂದಷ್ಟೇ ಸ್ಪಷ್ಟಪಡಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ನಿಲುವಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಲ್ಲಿನ ರೈತರು ತಮಿಳುನಾಡಿನಾದ್ಯಂತ ತೀವ್ರವಾಗಿ ಪ್ರತಿಭಟನೆ ನಡೆಸುತ್ತಿವೆ. ಈಗಾಗಲೇ ತಮಿಳುನಾಡಿನ ಹಲವು ಪಕ್ಷದ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ವಾಸ್ಕೋ-ಡಾ-ಗಾಮಾ-ವೇಲಾಂಗಣಿ ಎಕ್ಸ್ ಪ್ರೆಸ್ ರೈಲನ್ನು ತಡೆಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿವೆ.

ತಿರುಚಿ ರೈಲ್ವೆ ನಿಲ್ದಾಣಕ್ಕೆ ಪ್ರವೇಶ ಮಾಡಿ ಪ್ರತಿಭಟನೆ ಮಾಡಲು ಪ್ರಯತ್ನಿಸಿದ್ದ ಸುಮಾರು 200ಕ್ಕೂ ಹೆಚ್ಚು ರೈತರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಡಿಎಂಕೆ, ಎಂಎಂಕೆ ಹಾಗೂ ಟಿಎಂಕೆ ಪಕ್ಷದ ಸದಸ್ಯರೂ ಕೂಡ ಬಂಧಿಸಿರುವುದಾಗಿ ಹೇಳಲಾಗುತ್ತಿದೆ.

ತಿರುಚಿ, ಅರಿಯಲೂರ್ ಮತ್ತು ಪೆರಂಬಲೂರಿಗೆ ಮಾತ್ರ ಪ್ರತಿಭಟನೆಯ ಬಿಸಿ ತಟ್ಟಿದ್ದು, ಅಲ್ಲಿನ ಜನರು ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಆದರೆ, ಇನ್ನುಳಿದ ಪ್ರದೇಶಗಳಲ್ಲಿನ ಜನರ ಜೀವನ ಎಂದಿನಂತೆ ಸಾಮಾನ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.