ಜೆಎನ್ ಯು ಎಬಿವಿಪಿ ಉಪಾಧ್ಯಕ್ಷ ಸ್ಥಾನಕ್ಕೆ ಜತಿನ್ ಗೋರಯ್ಯ ರಾಜೀನಾಮೆ
ಜೆಎನ್ ಯು ಘಟಕದ ಎಬಿವಿಪಿ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜತಿನ್ ಗೋರಯ್ಯ ಎಬಿವಿಪಿಯ ಕೆಲವೊಂದು ಸಿದ್ಧಾಂತಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಜೆಎನ್ ಯು ಘಟಕದ ಎಬಿವಿಪಿ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಜತಿನ್ ಗೋರಯ್ಯ ಎಬಿವಿಪಿಯ ಕೆಲವೊಂದು ಸಿದ್ಧಾಂತಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಮುಖವಾಗಿ ದಲಿತರ ಮೇಲಿನ ದಾಳಿ ವಿಚಾರದಲ್ಲಿ ಎಬಿವಿಪಿಯ ನಿಲುವಿನಿಂದ ಬೇಸರಗೊಂಡಿರುವುದಾಗಿ ಜತಿನ್ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ. ಭಿನ್ನಾಭಿಪ್ರಾಯಗಳಿಂದ ಜೆಎನ್ ಯು ಎಬಿವಿಪಿಯಿಂದ ಹೊರಬರುತ್ತಿರುವ ನಾಲ್ಕನೇ ವಿದ್ಯಾರ್ಥಿ ಜತಿನ್ ಆಗಿದ್ದಾರೆ. ಈ ಹಿಂದೆ ರಾಷ್ಟ್ರವಿರೋಧ ಘೋಷಣೆ ಕೂಗಿದ ಪ್ರಕರಣ ನಡೆದ ನಂತರ ಫೆಬ್ರವರಿಯಲ್ಲಿ ಎಬಿವಿಪಿಯ ಜಂಟಿ ಕಾರ್ಯದರ್ಶಿ ಪ್ರದೀಪ್ ನರ್ವ್ವಾಲ್ ಹಾಗೂ ಇನ್ನಿಬ್ಬರು ಕಾರ್ಯಕರ್ತರು ಸಂಘಟನೆಯಿಂದ ಹೊರನಡೆದಿದ್ದರು.
ಇದಕ್ಕೂ ಮುನ್ನ ದಲಿತ ವಿರೋಧಿ, ಮಹಿಳಾ ವಿರೋಧಿಯಾಗಿರುವ ಮನುಸ್ಮೃತಿಯನ್ನು ವಿರೋಧಿಸಿ ಜೆಎನ್ ಯು ನಲ್ಲಿ ನಡೆಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಜತಿನ್ ಗೋರಯ್ಯ ಮನುಸ್ಮೃತಿಯನ್ನು ದಹಿಸಿ ದಲಿತ ವಿರೋಧಿ ಸಿದ್ಧಾಂತದ ವಿರುದ್ಧ ಪ್ರತಿಭಟನೆ ನಡೆಸಿದರು. ಈಗ ಎಬಿವಿಪಿ ನಿಲುವುಗಳಿಂದ ಅಸಮಾಧಾನಗೊಂಡಿದ್ದು, ಗುಜರಾತ್ ನ ಉನಾ ಸೇರಿದಂತೆ ಹಲವೆಡೆ ದಲಿತರ ಮೇಲೆ ನಡೆದ ದಾಳಿಯ ಬಗ್ಗೆ ಎಬಿಪಿವಿ ನಿಲುವು ಸರಿ ಇಲ್ಲ, ಎಬಿವಿಪಿ ಸಂಘಟನೆಗೆ ಸಾಮಾಜಿಕ ನ್ಯಾಯ ಬೇಕಿಲ್ಲ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


