ಈ ಕುಗ್ರಾಮದ ದಿಕ್ಕು ದಿಸೆ ಬದಲಿಸಿದ ಕ್ರಿಕೆಟ್ ದೇವರು
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ದತ್ತು ಪಡೆದುಕೊಂಡ ಆಂಧ್ರಪ್ರದೇಶದ ನೆಲ್ಲೂರು...

ಪಿಆರ್ ಕಂಡ್ರಿಗಾ(ನೆಲ್ಲೂರು): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಂಸದರ ಆದರ್ಶ ಗ್ರಾಮ ಯೋಜನೆಯ ಅಡಿಯಲ್ಲಿ ದತ್ತು ಪಡೆದುಕೊಂಡ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪಿಆರ್ ಕಂಡ್ರಿಗಾ ಗ್ರಾಮಕ್ಕೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಯಾವುದೇ ಮೂಲಭೂತ ಸೌಕರ್ಯಗಳಿಲ್ಲದ ಈ ಗ್ರಾಮದಲ್ಲಿ ಈಗ ದಿನದ 24 ಗಂಟೆ ನೀರು ಮತ್ತು ವಿದ್ಯುತ್ ಸಂಪರ್ಕ, ಅಗಲವಾದ ಸಿಮೆಂಟ್ ರೋಡ್, ಟೈಲ್ಸ್ ಹಾಕಿದ ಪಾದಚಾರಿ ಮಾರ್ಗ, ಒಳಚರಂಡಿ ವ್ಯವಸ್ಥೆವನ್ನು ಮಾಡಲಾಗಿದ್ದು, ಇದೇ ಕಾರಣಕ್ಕೆ ಪಟ್ಟಂ ರಾಜುವರಿ ಕಂಡ್ರಿಗಾ ಗ್ರಾಮ ದೇಶದ ಗಮನ ಸೆಳೆಯುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸಂಸದ ಆದರ್ಶ ಗ್ರಾಮ ಯೋಜನೆಯಡಿ 2014ರಲ್ಲಿ ಸಚಿನ್ 150 ಮನೆಗಳಿರುವ ನೆಲ್ಲೂರಿನ ಪಿಆರ್ ಕಂಡ್ರಿಗಾ ಕುಗ್ರಾಮವನ್ನು ದತ್ತು ಸ್ವೀಕರಿಸಿದ್ದರು.
ಮಕ್ಕಳು ಬರುತ್ತಿಲ್ಲವೆಂದು ಕೆಲ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕು ಎಂದು ಸರ್ಕಾರಗಳು ತೀರ್ಮಾನಿಸುತ್ತಿರುವಾಗಲೇ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳು ನಾಚುವಂತೆ ಮಾರ್ಪಾಡುಗೊಂಡಿದೆ. ವಿಶಾಲವಾದ ಅಡುಗೆ ಕೋಣೆ, ಊಟದ ಹಾಲ್, ಸುಸಚ್ಚಿತ ಕೊಠಡಿಗಳಿಂದ ಶಾಲೆಯ ಮಾರ್ಡನ್ ರೂಪ ಪಡೆಕೊಂಡಿದೆ.
ಗ್ರಾಮದ ಅಭಿವೃದ್ಧಿಗೆ ಸಚಿನ್ ಅವರು ಸಂಸದರ ನಿಧಿಯಿಂದ 4 ಕೋಟಿ ರುಪಾಯಿ ಅನುದಾನ ನೀಡಿದ್ದು ನೆಲ್ಲೂರು ಜಿಲ್ಲಾಡಳಿತ 2.9 ಕೋಟಿ ರುಪಾಯಿ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ಮಾಡಲಾಗಿದ್ದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.
ರಾಜ್ಯಸಭಾ ಸದಸ್ಯರಾಗಿ ನೇಮಕಗೊಂಡಿದ್ದರೂ ಕಲಾಪದಲ್ಲಿ ಭಾಗಿಯಾಗುತ್ತಿಲ್ಲ ಎಂದು ಹಲವು ಬಾರಿ ಟೀಕೆಗೆ ಗುರಿಯಾಗಿದ್ದರು. ಇದೀಗ ಕುಗ್ರಾಮವನ್ನು ಆದರ್ಶ ಗ್ರಾಮ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


